ಮೊಬೈಲ್ ಬಿಟ್ಟು ಓದಿಕೋ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ


ಹಾಸನ: ಮೊಬೈಲ್ ಬಿಟ್ಟು ಚೆನ್ನಾಗಿ ಓದು ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸನ ತಾಲ್ಲೂಕಿನ ದುಂಡನಾಯಕನಹಳ್ಳಿಯ ಕೆಎಸ್ ಆರ್ ಪಿ ಪೊಲೀಸ್ ಪೇದೆ ಡಿ.ವಿ.ಕುಮಾರ್ ಹಾಗು ಹೆಚ್.ಎನ್.ಕಮಲ ಅವರ ಪುತ್ರ ಡಿ.ಕೆ.ಪ್ರಜ್ವಲ್‌ಕುಮಾರ್ (23) ಮೃತ ವಿದ್ಯಾರ್ಥಿ.
ಹಾಸನದ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮಸಿ ಓದುತ್ತಿದ್ದನು. ಕಡಿಮೆ ಅಂಕ ಬಂದಿದ್ದಕ್ಕೆ ಮೊಬೈಲ್ ಬಿಟ್ಟು ಓದಿನ ಕಡೆ ಗಮನ ಕೊಡು ಎಂದು ಪೋಷಕರು ಬುದ್ದಿ ಹೇಳಿದ್ದರು.
ಪೋಷಕರ ಮಾತಿಗೆ ಓಕೆ‌ ಎಂದಿದ್ದ ಪ್ರಜ್ವಲ್‌ಕುಮಾರ್ 
ಮನೆಯಲ್ಲಿ ಯಾರೂ ಇಲ್ಲದಾಗ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾನೆ. 
ನಿನ್ನೆ ಕರ್ತವ್ಯ ಮುಗಿಸಿ ಕುಮಾರ್ ಅವರು ಮನೆಗೆ ಬಂದಿದ್ದು ಮನೆಯ ಬಾಗಿಲು ಲಾಕ್ ಆಗಿದೆ. 
ತಮ್ಮ ಬಳಿಯಿದ್ದ ಮತ್ತೊಂದು ಕೀಯಿಂದ ಬಾಗಿಲು ತೆರೆದು ನೋಡಿದಾಗ  ಪ್ರಜ್ವಲ್ ಫ್ಯಾನ್ ಗೆ ನೇತಾಡುತ್ತಿರುವುದನ್ನು ಕಂಡಿದ್ದಾರೆ.
ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Post a Comment

0 Comments