ಕಾಡಾನೆ ವಿಕ್ರಾಂತ್ ಸೆರೆ ಕಾರ್ಯಾಚರಣೆ ಯಶಸ್ವಿ
ಹಾಸನ: ಕಾಡಾನೆ ವಿಕ್ರಾಂತ್‌ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು ಸತತ ಆರು ಗಂಟೆಗಳ ಕಾರ್ಯಾಚರಣೆ ಬಳಿಕ ಚುಚ್ಚುಮದ್ದು ನೀಡುವಲ್ಲಿ ಸಫಲತೆ ಸಾಧಿಸಿದ್ದಾರೆ.
ಬೇಲೂರು ತಾಲ್ಲೂಕಿನ ವಾಟೀಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಎರಡು ಕಾಡಾನೆಗಳ ಜೊತೆ ನಿಂತಿದ್ದ ವಿಕ್ರಾಂತ್‌ನನ್ನು ಬೇರ್ಪಡಿಸಿ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ.
ಬೆಳಿಗ್ಗೆಯಿಂದ ಏಳು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮಧ್ಯಾಹ್ನದ ವರೆಗೂ ಇಟಿಎಫ್ ಸಿಬ್ಬಂದಿ ವಿಕ್ರಾಂತ್‌ನ ಬೆನ್ನಿಗೆ ಬಿದ್ದಿದ್ದರು. ಮೂರನೇ ದಿನದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆ ಹಾಗು ಸ್ಥಳೀಯರು ತುಸು ನಿರಾಳರಾಗಿದ್ದಾರೆ.

0 Comments