ಹನಿಟ್ರ್ಯಾಪ್ ನಿರ್ದೇಶಕ ಇವರೇ ಅಂದ್ರು ದೇವರಾಜೇಗೌಡ
ಹಾಸನ: ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ವಿಚಾರವಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ಪ್ರತಿಕ್ರಿಯೆ ನೀಡಿದ್ದು, ಹನಿಟ್ರ್ಯಾಪ್ ಮಾಡಿಸಿದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಅವರೇ ಇದರ ನಿರ್ದೇಶಕ. ಅಧಿಕಾರದ ಆಸೆ, ಅವರ ವಿರುದ್ಧ ಧ್ವನಿ ಎತ್ತಿದವರನ್ನು ಅಡಗಿಸಲು ಈ ರೀತಿ ಮಾಡಿದ್ಹದಾರೆ ಎಂದರು.
ಡಿ.ಕೆ. ಶಿವಕುಮಾರ್ ಬಳಿ ಹನಿಟ್ರ್ಯಾಪ್ ಮಾಡುವ ತಂಡವಿದೆ. ಹನಿಟ್ರ್ಯಾಪ್ ಮಾಡಿ ಅದನ್ನು ಒಂದೆಡೆ ಗುಪ್ತವಾಗಿ ಇಡಲಾಗುತ್ತಿದೆ. ಅದನ್ನು ಪರಿಶೀಲನೆ ಮಾಡುವವರು ಇದ್ದಾರೆ. ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ಮಹತ್ವದ ದಾಖಲೆಗಳು ನಮ್ಮ ಬಳಿ ಇವೆ. ಈಗಾಗಲೇ ಅದನ್ನು ಯಾರಿಗೆ ತಲುಪಿಸಬೇಕು, ಅವರಿಗೆ ತಲುಪಿಸಿ ಆಗಿದೆ. ಕೂಡಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಒಂದು ವರ್ಷದ ಹಿಂದೆಯೇ ನಾನು ಈ ಬಗ್ಗೆ ಹೇಳಿದ್ದೆ.ಹ ನಿಟ್ರ್ಯಾಪ್ ಗ್ಯಾಂಗ್‌ಗೆ ಡಿ.ಕೆ.ಶಿವಕುಮಾರ್ ಅವರೇ ನಾಯಕರು. ಇದೀಗ ಅವರ ಪಕ್ಷದ ಸಚಿವರಿಗೆ ಸತ್ಯ ಗೊತ್ತಾಗಿದೆ. ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯತ್ನಿಸಿದವರ ಹನಿಟ್ರ್ಯಾಪ್ ಮಾಡಿದ್ದಾರೆ. ಅಧಿಕಾರಕ್ಕಾಗಿ ಮುಖ್ಯಮಂತ್ರಿಯನ್ನೇ ಹನಿಟ್ರ್ಯಾಪ್ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

0 Comments