ಜಡ್ಜ್ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ
ಹಾಸನ: ನ್ಯಾಯಾಧೀಶರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಎಸ್ ಬಿಎಂ ಕಾಲೋನಿಯಲ್ಲಿ ನಡೆದಿದೆ.
ಪರ್ಸನಲ್ ಕೋರ್ಟ್ 57ರ ಜಡ್ಜ್ ಆಗಿರುವ ಜೈಶಂಕರ್ ಅವರ ಮನೆಯಲ್ಲಿ ಕಳೆದ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ. ನಟ ದರ್ಶನ್ ಪ್ರಕರಣದ ಜಡ್ಜ್ ಇವರಾಗಿದ್ದಾರೆ.
ಎಸ್ ಬಿಎಂ ಕಾಲೋನಿಯಲ್ಲಿರುವ ತಮ್ಮ ಮನೆಯನ್ನು ಭರತ್ ಎಂಬುವರಿಗೆ ಬಾಡಿಗೆ ಕೊಟ್ಟಿದ್ದಾರೆ.
ಕಬ್ಬಿಣದ ರಾಡ್‌ನಿಂದ ಮನೆಯ ಹಿಂಬಾಗಿಲ ಬಾಗಿಲು ಮುರಿದು ಒಳನುಗ್ಗಿರುವ ಚೋರರು ಹಣ, ಚಿನ್ನಾಭರಣ ಪರಿಶೀಲನೆ ನಡೆಸುತ್ತಿದ್ದಾಗ ಶಬ್ದವಾದ್ದರಿಂದ ಭರತ್ ಲೈಟ್ ಆನ್ ಮಾಡಿದ್ದಾರೆ. ತಕ್ಷಣವೇ ಎಚ್ಚೆತ್ತ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಎಸ್ಕೇಪ್ ಆಗುವ ಧಾವಂತದಲ್ಲಿ ಗನ್, ಕಬ್ಬಿಣದ ರಾಡ್ ಬಿಟ್ಟು ಹೋಗಿದ್ದಾರೆ.
ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

0 Comments