ದಿಡಗ ಗ್ರಾಪಂ ಸಹಾಯಕ ಲೆಕ್ಕಾಧಿಕಾರಿ ಅನುಮಾನಾಸ್ಪದ ಸಾವು
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ದಿಡಗ ಗ್ರಾಮ ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಅನುಮಾನಾಸ್ಪದ ಸಾವಿಗೀಡಾಗಿದ್ದಾರೆ.
ಆಲೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದ
ಶಿವಪ್ರಸಾದ್ (32) ಮೃತರು. ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆ ಬಳಿ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ.
ಮದ್ಯ ವ್ಯಸನಿಯಾಗಿದ್ದ ಶಿವಪ್ರಸಾದ್ ಮೃತದೇಹ ತಮ್ಮ KA-13-M-7321 ರೆನಾಲ್ಟೊ ಕಾರಿನೊಳಗೆ ಪತ್ತೆಯಾಗಿದೆ.
ಬಹಳ ಹೊತ್ತು ಕಾರು ನಿಂತಲ್ಲೇ ನಿಂತಿದ್ದನ್ನು ನೋಡಿದ ಸ್ಥಳೀಯರು ಪರಿಶೀಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ. ಸ್ಥಳಕ್ಕಾಗಮಿಸಿದ ಪಟ್ಟಣ ಠಾಣೆ ಪೊಲೀಸರು ಮೆಕ್ಯಾನಿಕ್ ಕರೆಸಿ ಕಾರಿನ ಡೋರ್ ಲಾಕ್ ಒಡೆದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

0 Comments