ಹಾಸನ: ಮಾಜಿ ಸಚಿವ ಸಂಸದ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು ಈ ಕುರಿತು ಬಿಜೆಪಿ ಮುಖಂಡ ದೇವರಾಜೇಗೌಡ ಪ್ರತಿಕ್ರಿಯಿಸಿದ್ದಾರೆ.
ವಿಚಾರಣೆ ಆರಂಭವಾಗಿ ಕೇವಲ ಆರು ತಿಂಗಳಲ್ಲಿ ತೀರ್ಪು ಪ್ರಕಟವಾದುದು ಈ ದೇಶದ ನ್ಯಾಯಾಂಗ ವ್ಯವಸ್ಥೆಯ ತ್ವರಿತ ಕಾರ್ಯವೈಖರಿಯನ್ನು ತೋರಿಸುತ್ತದೆ. ನ್ಯಾಯಾಲಯವು ಮೂರು ವರ್ಷದಿಂದ ಜೀವಾವಧಿ ಶಿಕ್ಷೆವರೆಗೆ ವಿಧಿಸಬಹುದಾದ ಶಿಕ್ಷೆಯನ್ನು ಈಗ ನಿರ್ಧರಿಸಲಿದೆ ಎಂದರು.
ಈ ದೇಶದ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ರಾಜಕೀಯ ಪ್ರಭಾವ, ಹಣದ ಬಲದ ವಿರುದ್ಧವೂ ನ್ಯಾಯ ಸ್ಥಾಪನೆ ಸಾಧ್ಯ ಎಂಬುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ, ಎಲ್ಲರೂ ತಲೆಬಾಗಬೇಕು.
ಪ್ರಜ್ವಲ್ ರೇವಣ್ಣ ಅವರ ವಕೀಲರು ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲರಾದರು. ಸಾಕ್ಷ್ಯಗಳನ್ನು ಪ್ರಬಲವಾಗಿ ಮಂಡಿಸಿಲ್ಲ. ಸಮಯವಿಲ್ಲದೆ, ಮಾಹಿತಿ ಸರಿಯಾಗಿ ನೀಡದೆ ಎಡವಿದ್ದಾರೆಂದರು.
ಪ್ರಜ್ವಲ್‌ರ ಕಣ್ಣೀರು ತೋರಿ ಭಾವುಕರಾಗಬಾರದು. ಎಷ್ಟು ಹೆಣ್ಣುಮಕ್ಕಳ ಬದುಕು ಈ ವ್ಯಕ್ತಿಯಿಂದ ಹಾಳಾಗಿದೆ ಎಂಬುದನ್ನು ಮರೆಯಬಾರದು. ಸಂತ್ರಸ್ತೆ ನಿಜವಾಗಿಯೂ ತೊಂದರೆ ಅನುಭವಿಸಿದ ವ್ಯಕ್ತಿಯಾಗಿದ್ದರಿಂದ ನ್ಯಾಯ ದೊರೆತಿದೆ ಎಂದು ಹೇಳಿದರು.
0 Comments