ವಿಕ್ರಾಂತ್ ಸಿಗುತ್ತಿಲ್ಲ, ಭೀಮ ಕ್ಯಾರೇ ಎನ್ನುತ್ತಿಲ್ಲ
ಹಾಸನ: ವಿಕ್ರಾಂತ್ ಹೆಸರಿನ ಕಾಡಾನೆ ಸೆರೆಗೆ ಕಳೆದ ಮೂರು ದಿನಗಳಿಂದ ನಡೆದ ಪ್ರಯತ್ನ ಕ್ಕೆ ಭಾರಿ ಹಿನ್ನೆಡೆಯಾಗುತ್ತಿದೆ.
ಬೇಲೂರು ತಾಲ್ಲೂಕಿನ ವಾಟೀಹಳ್ಳಿ ಗ್ರಾಮದಲ್ಲಿ ಘಟನೆ ವಿಕ್ರಾಂತ್‌ನಿಂದ ಬೇರ್ಪಡಿಸಲು ಪೂರ್ವ ನಿಯೋಜನೆಯಂತೆ ಭೀಮನಿಗೆ ಅರವಳಿಕೆ ಚುಚ್ಚುಮದ್ದು ನೀಡಿ ರೇಡಿಯೋ ಕಾಲರ್ ಅಳವಡಿಸಲು ಪ್ರಯತ್ನಿಸಲಾಯಿತಾದರೂ ದೈತ್ಯಾಕಾರದ ಭೀಮ ಪ್ರಜ್ಞೆ ತಪ್ಪದೆ ತಲೆಯಾಡಿಸುತ್ತಿರುವುದನ್ನು ಅರಿತು ಸಿಬ್ಬಂದಿ ವಾಪಾಸ್ಸಾದರು.
ಭೀಮ ಸಿಟ್ಟಾದರೆ ಪರಿಸ್ಥಿತಿ ವಿಷಮಯವಾಗಿರುತ್ತದೆ ಎಂಬುದನ್ನು ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ವಾಪಸ್ಸಾಗಬೇಕಾಯಿತು. ಬೆಳಿಗ್ಗೆಯಿಂದ ವಿಕ್ರಾಂತ್‌ನ ಸೆರೆಗೆ ಏಳು ಸಾಕಾನೆಗಳು ಹಾಗೂ 200ಕ್ಕೂ ಹೆಚ್ಚು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಆದರೆ ವಿಕ್ರಾಂತ್ ಒಂದೇ ಕಡೆ ನಿಲ್ಲದೆ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಾ ಓಡಾಡಿಕೊಂಡಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

0 Comments