ಹಾಸನ: ಹಾಸನದಲ್ಲಿ ಮದುವೆ ಗಂಡು ಬೇರೆಯವನಿದ್ದಾನೆ. ನಾವು ಮುಂದೆ ನಿಂತು ಮದುವೆ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಾಸನ, ಕೋಲಾರ, ಮಂಡ್ಯದಲ್ಲಿ ಅಭ್ಯರ್ಥಿ ಮಾತ್ರ ಜೆಡಿಎಸ್ ನವರು ಆಗಿರುತ್ತಾರೆ. ಮದುವೆ ಗಂಡು ಯಾರಾದರೇನು ಮದುವೆ ಮಾಡೋದು, ಬಂದವರನ್ನು ಚೆನ್ನಾಗಿ ನೋಡ್ಕೋಳ್ಳೋದು ನಮ್ಮ ಜವಾಬ್ದಾರಿ. ಮದುವೆ ನಮ್ಮದಲ್ಲವಾಗಿರುವುದರಿಂದ ಸ್ವಲ್ಪ ಬೇಜಾರಾಗುತ್ತೆ ಎಂದು ಹೇಳಿದರು.
ಇತ್ತೀಚಿನ ಚುನಾವಣೆಯಲ್ಲಿ ಜೆಡಿಎಸ್ ಬಳಿಕ ಬಿಜೆಪಿ ಎಲ್ಲಾ ಬೂತ್ ಗಳಲ್ಲಿ ಶಕ್ತಿ ಪ್ರದರ್ಶನ ಮಾಡ್ತಾ ಇದೆ. ಕಾಂಗ್ರೆಸ್ ಗಿಂತ ಬಿಜೆಪಿ ಸಾಧನೆ ಚೆನ್ನಾಗಿದೆ.
ಬಿ.ಬಿ.ಶಿವಪ್ಪ ಹಾಸನದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.ಪಕ್ಷ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು ಎಂದರು.
0 Comments