ಬೇಲೂರು: ಪಟ್ಟಣದ ನೆಹರು ನಗರ ಹೊಯ್ಸಳ ಮಾರ್ಬಲ್ಸ್ ಮುಂಭಾಗ
ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದಿದ್ದನ್ನು ಗಮನಿಸಿರುವ ಸಾರ್ವಜನಿಕರು ಕೂಡಲೇ ಸೆಸ್ಕ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಭಾರಿ ಅನಾಹುತ ತಪ್ಪಿಸಿದ್ದಾರೆ.
ಮುಂಜಾನೆ ವಾಯುವಿಹಾರಕ್ಕೆ ಹೋಗುತ್ತಿದ್ದ ಸಾರ್ವಜನಿಕರ ಕಣ್ಣಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಕಂಡಿದೆ. ನಂತರ ಈ ವಿಷಯವನ್ನು ತ್ವರಿತವಾಗಿ ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ. ತಕ್ಷಣ ದಫೇದಾರ್ ಅಶೋಕ್ ಅವರು ಬಂದು
ಸೆಸ್ಕ್ ಅಧಿಕಾರಿಗಳೊಂದಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಭಾರೀ ಅನಾಹಿತ ತಪ್ಪಿಸಿದ್ದಾರೆ.
0 Comments