ಹಾಸನ : ಲೋಕಸಭೆ ಚುನಾವಣೆ ದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಸಿ.ಸತ್ಯಭಾಮ ಅವರನ್ನ ವರ್ಗಾವಣೆ ಮಾಡಬೇಕೆಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪತ್ರ ಬರೆದ ಬೆನ್ನಲ್ಲೇ ಸ್ಪಷ್ಟನೆ ಕೇಳಿ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.
ಕಳೆದ ಎಂಟು ತಿಂಗಳಿಂದ ಹಾಸನದ ಡಿಸಿ ಆಗಿರುವ ಸಿ.ಸತ್ಯಭಾಮ ಜಿಲ್ಲಾ ಉಸ್ತುವಾರಿ ಸಚಿವರ ಅಣತಿಯಂತೆ ಮಾತ್ರ ಕೆಲಸ ಮಾಡುತ್ತಾರೆ. ರಾಜಣ್ಣ ಅವರ ಸಮುದಾಯಕ್ಕೆ ಸೇರಿರುವ ಸತ್ಯಭಾಮ ಅವರಿಂದ ನಿಷ್ಪಕ್ಷಪಾತ ಆಡಳಿತ ಸಾಧ್ಯವಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹಾಸನ ಡಿಸಿ ಜನರ ಜೊತೆ ಸೌಜನ್ಯದ ವರ್ತನೆ ತೋರುವುದಿಲ್ಲ. ತಮ್ಮ ಸಹೊದ್ಯೋಗಿಗಳಿಗೆ ಗೌರವ ಕೊಡುವುದಿಲ್ಲ, ಎಲ್ಲರೊಟ್ಟಿಗೂ ಜಗಳ ಮಾಡಿಕೊಳ್ತಾರೆ. ಈ ಹಿಂದೆ ಅವರು ಕೋಲಾರದಲ್ಲಿ ಇದ್ದಾಗಲೂ ಸಹೋದ್ಯೋಗಿಗಳ ಜೊತೆ ಜಗಳ ಮಾಡಿಕೊಂಡಿದ್ದರು ಎಂದು ಉಲ್ಲೇಖಿಸಿದ್ದಾರೆ.
ಹಾಸನದಲ್ಲಿ ಫೆಬ್ರವರಿ 24 ಹಾಗೂ ಮಾರ್ಚ್ 1 ರಂದು ನಡೆದ ಸಿಎಂ ಕಾರ್ಯಕ್ರಮಕ್ಕೆ ಇಲಾಖೆಗಳಿಂದ ಹಣ ವಸೂಲಿ ಮಾಡಿರುವ ಆರೋಪವಿದೆ. ಹತ್ತಾರು ಲಕ್ಷ ಹಣ ವಸೂಲಿ ಮಾಡಿ ಜನರಿಗೆ ಹಂಚಿದ್ದಾರೆ. ಆಡಳಿತ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಈ ಹಿನ್ನಲೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
0 Comments