ಹಾಸನ: ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇಂದು ನಾಮಪತ್ರ ಸಲ್ಲಿಸುತ್ತಿದ್ದು, ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನಲೆ ನಗರದಲ್ಲಿ ಸಂಚಾರ ಮಾರ್ಗ ಬದಲಿಸಲಾಗಿದೆ. ಮಧ್ಯಾಹ್ನ 12 ರಿಂದ ಸಂಜೆ 4ರ ವರಗೆ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಲಾಗಿದೆ. ಅರಸೀಕೆರೆಯಿಂದ ಬರುವ ವಾಹನಗಳು ಬೂವನಹಳ್ಳಿ ಮೂಲಕ ಬೈಪಾಸ್ ಸೇರಬೇಕು. ಬೆಂಗಳೂರಿನಿಂದ ಬರುವ ವಾಹನಗಳು ಚನ್ನಪಟ್ಟಣ ಸರ್ಕಲ್ ಮಾರ್ಗವಾಗಿ ಹೆದ್ದಾರಿಯಿಂದಲೇ ಹೋಗಬೇಕು. ಇನ್ನು ಆಲೂರು, ಸಕಲೇಶಪುರ, ಬೇಲೂರಿನಿಂದ ಬರುವ ಸವಾರರು ಸಂತೆಪೇಟೆ ವೃತ್ತದಿಂದ ಬಿಟ್ಟಗೌಡನಹಳ್ಳಿ ಮಾರ್ಗವಾಗಿ ಮುಖ್ಯ ರಸ್ತೆ ಸೇರಬೇಕು. ಡೇರಿ ವೃತ್ತದಿಂದ ಜಿಲ್ಲಾ ಕಾಂಗ್ರೆಸ್ ಕಚೇರಿ ವರೆಗೆ ಮೆರವಣಿಗೆ ನಡೆಯುವ ಕಾರಣಕ್ಕೆ ಮತ್ತೊಂದು ಬದಿಯ ರಸ್ತೆಯನ್ನು ತಾತ್ಕಾಲಿಕವಾಗಿ ಏಕಮುಖದ ಬದಲಾಗಿ ದ್ವಿಮುಖ ರಸ್ತೆಯಾಗಿ ಪರಿವರ್ತಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
0 Comments