ಹಾಸನ: ಹೊಳೆನರಸೀಪುರ ವಿಧಾನಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪಡೆಯುವ ಮತಕ್ಕಿಂತ ಹಾಸನದಲ್ಲಿ ಒಂದು ಓಟು ಜಾಸ್ತಿ ಕೊಡಿಸುತ್ತೇನೆ ಎನ್ನುವ ಮೂಲಕ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರು ಜೆಡಿಎಸ್ ವಿರುದ್ಧ ಮತ್ತೊಂದು ರೀತಿಯ ದಾಳ ಉರುಳಿಸಿದ್ದಾರೆ.
ನಗರದ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಪ್ರೀತಂ, ಆರು ಬಾರಿ ಶಾಸಕರಾಗಿರುವ ಹೊಳೆನರಸೀಪುರ ಶಾಸಕರಿಗಿಂತ ಹಾಸನದಲ್ಲಿ ಒಂದು ಮತ ಹೆಚ್ಚಿಗೆ ಕೊಡಿಸುತ್ತೇನೆ. ನಾನು ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ ಎಂದರು.
ಆ ಮೂಲಕ ಜೆಡಿಎಸ್ ಜೊತೆಗಿನ ವೈರತ್ವ ತಣ್ಣಗಾಗಿಲ್ಲ ಎಂಬ ಚರ್ಚೆಗಳು ಶುರುವಾಗಿದೆ. ಸುದ್ದಿಗೋಷ್ಟಿಯ ಉದ್ದಕ್ಕು ಎನ್ ಡಿಎ ಅಭ್ಯರ್ಥಿ ಎಂದರೆ ಹೊರತು ಪ್ರಜ್ವಲ್ ಹೆಸರನ್ನು ಒಮ್ಮೆಯೋ ಬಳಸಲಿಲ್ಲ. ನಾನು ಸ್ಟಾರ್ ಕ್ಯಾಂಪೇನರ್ ಆಗಿದ್ದು, ಆಗಾಗ ಹಾಸನಕ್ಕೆ ಬಂದು ಹೋಗುತ್ತೇನೆ ಎಂದಷ್ಟೇ ಹೇಳಿದರು.
0 Comments