ಹೊಳೆನರಸೀಪುರ : ಲೋಕಸಭೆ ಚುನಾವಣೆಯ ಮತದಾನದ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಡಿದಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೆ.ಬಿ.ಪಾಳ್ಯ ಗ್ರಾಮದ ಮತಗಟ್ಟೆ ಸಂಖ್ಯೆ-249 ರಲ್ಲಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಮೋಹನ ಕುಮಾರ ಹಲ್ಲೆಗೊಳಗಾದ ವ್ಯಕ್ತಿ.
ಮಧ್ಯಾಹ್ನ ಹಳೇಕೋಟೆ ಹೋಬಳಿ ಕೆ.ಬಿ.ಪಾಳ್ಯ ಗ್ರಾಮ ಮತಗಟ್ಟೆಗೆ ಕಾಂಗ್ರೆಸ್ ಮುಖಂಡರಾದ ಅನುಪಮಾ ಮಹೇಶ್ ಅವರು ಅವರು ಭೇಟಿ ನೀಡಿದ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತ ಜೆಡಿಎಸ್‌ಗೆ ಜೈಕಾರ ಕೂಗಿದ್ದು, ಇದರಿಂದ ಕೋಪಗೊಂಡ ಉಭಯ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರಿಗೆ ಜೈಕಾರ ಕೂಗುತ್ತಾ ಘರ್ಷಣೆಗೆ ಎಡೆಮಾಡಿಕೊಟ್ಟಿದ್ದಾರೆ.
0 Comments