ಹೊಳೆನರಸೀಪುರಕ್ಕಿಂದು ಎಸ್ ಐಟಿ ಟೀಂಸಂತ್ರಸ್ತ ಮಹಿಳೆಯರಿಂದ ಮಾಹಿತಿ ಸಂಗ್ರಹ


ಹಾಸನ: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ಇಂದು ಎಸ್ ಐಟಿ ಟೀಂ ಹೊಳೆನರಸೀಪುರಕ್ಕೆ ಬರಲಿದ್ದು, ಸಂತ್ರಸ್ತ ಮಹಿಳೆಯರಿಂದ ಮಾಹಿತಿ ಪಡೆಯಲಿದೆ.
ಪ್ರಕರಣದ ತನಿಖೆಗಾಗಿ ಎಸ್ಐಟಿ ಸ್ಟ್ರಾಂಗ್ ಟೀಂ ಸಜ್ಜಾಗಿದೆ.
ಒಟ್ಟು 18 ಜನರ ಮೂರು ತಂಡ ರಚಿಸಲಾಗಿದೆ. ಇಬ್ಬರು ಮಹಿಳೆ ಸೇರಿ ಮೂವರು ಎಸಿಪಿ ಮಟ್ಟದ ಅಧಿಕಾರಿಗಳು ತಂಡದಲ್ಲಿದ್ದಾರೆ.
ಮೂವರು ಮಹಿಳಾ ಇನ್ಸ್‌ಪೆಕ್ಟರ್ ಸೇರಿ ಐವರು ಇನ್ಸ್‌ಪೆಕ್ಟರ್‌ಗಳನ್ನ ಸರ್ಕಾರ ನೇಮಿಸಿದೆ‌.
ಹಿರಿಯ ಐಪಿಎಸ್ ಅಧಿಕಾರಿಗಳಾದ ಬಿಜಯಕುಮಾರ್ ಸಿಂಗ್ , ಸುಮನ್ ಡಿ. ಪನ್ನೇಕರ್ ಹಾಗೂ ಮೈಸೂರು ಎಸ್ಪಿ ಸೀಮಾ‌ ಲಾಠ್ಕರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ತಂಡದ ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್‌ಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ವರದಿ ಮಾಡಿಕೊಳ್ಳಲಿದ್ದಾರೆ.
ರಾಜ್ಯವನ್ನು ಬೆಚ್ಚಿ ಬೀಳಿಸಿದ ಹಲವು ಮಹಿಳೆಯರ ಅಶ್ಲೀಲ ವೀಡಿಯೋ ವೈರಲ್ ಪ್ರಕರಣ ಸಂಬಂಧ ಎಸ್ ಐಟಿ ಸನ್ನದ್ದವಾಗಿದೆ.

Post a Comment

0 Comments