ಹಾಸನ : ನಗರ ಉಪ ವಿಭಾಗದ ಡಿವೈಎಸ್‌ಪಿ ಪಿ.ಕೆ.ಮುರುಳೀಧರ್ ಅವರ ಬ್ಯಾಂಕ್ ಖಾತೆಯಿಂದ ೧೫,೮೯,೭೬೧ ರೂ. ಹಣ ಬೇರೆಯವರ ಖಾತೆಗೆ ವರ್ಗಾವಣೆಯಾಗಿದ್ದು ಸೈಬರ್ ವಂಚಕರ ಜಾಣ್ಮೆಗೆ ಖಾಕಿ ಪಡೆ ಸುಸ್ತಾಗಿದೆ.
ಪಿ.ಕೆ.ಮುರಳೀಧರ್ ಅವರು ಮಡಿಕೇರಿ ಮುಖ್ಯ ಶಾಖೆ ಹಾಗು ಭಾಗಮಂಡಲ ಉಪ ಶಾಖೆಯ ಕೆನರಾ ಬ್ಯಾಂಕ್‌ನಲ್ಲಿ ಪ್ರತ್ಯೇಕ ಖಾತೆ ಹೊಂದಿದ್ದಾರೆ. ಮೇ ೨೦ರ ಮಧ್ಯಾಹ್ನ ೧.೩೦ಕ್ಕೆ ಮೊಬೈಲ್‌ಗೆ ಬಂದ ಮೇಸೆಜ್ ನೋಡಿದಾಗ ಮಡಿಕೇರಿ ಬ್ಯಾಂಕ್ ಖಾತೆಯಿಂದ ೧೨,೧೦,೭೧೧ ರೂ. ಹಣ ೨೫ ಸಲ ವರ್ಗಾವಣೆಯಲ್ಲಿ ಬೇರೆಯವರ ಖಾತೆಗೆ ಜಮೆಯಾಗಿದೆ. ಅದೇ ದಿನ ಭಾಗಮಂಡಲ ಉಪ ಶಾಖೆಯ ಖಾತೆಯಿಂದ ೧೦ ವರ್ಗಾವಣೆಯಲ್ಲಿ ೩,೮೮,೦೫೦ ರೂ. ಮಾಯವಾಗಿರುವುದು ತಿಳಿದಿದೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments