ಗರ್ಭಕೊರಳ ಕ್ಯಾನ್ಸರ್ ಗೆ ಲಸಿಕೆಮೇ 31ಕ್ಕೆ ಹಾಸನದಲ್ಲಿ ಅಭಿಯಾನ

ಹಾಸನ: ಗರ್ಭಕೊರಳ ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸಲು ಮೇ 31ರಂದು ನಗರದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಬಿ.ಕೆ.ಸೌಮ್ಯಮಣಿ ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಜಾಗೃತಿ ಜಾಥಾಗೆ ಚಾಲನೆ ನೀಡಲಿದ್ದಾರೆ. 
ದೇಶದಲ್ಲಿ ಪ್ರತಿ ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕೊರಳ ಕ್ಯಾನ್ಸರ್ ನಿಂದ ಸಾಯುತ್ತಾರೆ. 1.25 ಲಕ್ಷ ಮಹಿಳೆಯರಿಗೆ ಪ್ರತಿವರ್ಷ ತಗುಲುತ್ತಿದೆ. ಹೆಚ್ ಪಿವಿ ವ್ಯಾಕ್ಸಿನ್ ಹಾಕಿಸಬೇಕು. 9 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ‌ ಹಾಕಿಸಿದರೆ ಕಾಯಿಲೆ ತಡೆಗಟ್ಟಬಹುದು ಎಂದರು.
ಗರ್ಭಕೊರಳ ಕ್ಯಾನ್ಸರ್ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಡಾ. ಭಾರತಿ ರಾಜಶೇಖರ್ ಅವರು ಮಾತನಾಡಿ, ಬಹಳಷ್ಟು ದೇಶಗಳಲ್ಲಿ ಗರ್ಭಕೊರಳ ಕ್ಯಾನ್ಸರ್ ನಿರ್ಮೂಲನೆ ಮಾಡಲಾಗಿದೆ. ವ್ಯಾಕ್ಸಿನ್ ಮೂಲಕ ನಿರ್ಮೂಲನೆ ಮಾಡಬಹುದು. ಕ್ಯಾನ್ಸರ್ ಪರೀಕ್ಷೆಗೆ ಒಂದರಿಂದ ಒಂದೂವರೆ ಸಾವಿರ ರೂ.‌ಖರ್ಚಾಗುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಡಾ. ವಿಶಾಲಾಕ್ಷಿ, ಡಾ.ಸಾವಿತ್ರಿ, ಡಾ.ದಿನೇಶ್, ಡಾ.ಪಾಲಾಕ್ಷ ಹೆಚ್.ಕೆ. ಇದ್ದರು.

Post a Comment

0 Comments