ಒಂದಲ್ಲ ಮೂರು ಕೇಸ್ ಕುರಿತು ದೇವರಾಜೇಗೌಡರ ವಿಚಾರಣೆ ಹಾಸನ ಡಿಸಿಯಿಂದಲೂ ದಾಖಲಾಗಿತ್ತು ಎಫ್ ಐಆರ್


ಹಾಸನ: ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟಿರುವ ವಕೀಲ ದೇವರಾಜೇಗೌಡ ಮತ್ತೆ ಎರಡು ಕೇಸ್ ಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಬೇಕಾಗಿದೆ.
ಚಿತ್ರದುರ್ಗದ ಹಿರಿಯೂರಿಲ್ಲಿ ನಿನ್ನೆ ಸಂಜೆ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಬೆಳಗ್ಗೆಯಿಂದ ವಿಚಾರಣೆ ನಡೆಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ವಕೀಲರನ್ನು ಸುಪರ್ದಿಗೆ ಪಡೆಯಲಾಗಿತ್ತಾದರೂ ಮತ್ತೆ ಎರಡು ಕೇಸ್ ಗಳನ್ನು ಇದೇ ಸಂದರ್ಭದಲ್ಲಿ ಮುನ್‌ನಲೆಗೆ ತರಲಾಗಿದೆ.
ಎಸ್ಪಿ ಮಹಮದ್ ಸುಜಿತಾ, ಎ‌ಎಸ್‌ಪಿ ವೆಂಕಟೇಶ್ ನಾಯ್ಡು, ಡಿವೈಎಸ್‌ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್‌ರಿಂದ ವಿಚಾರಣೆ
ನಡೆಯುತ್ತಿದೆ.
ಅತ್ಯಾಚಾರ ಪ್ರಕರಣದ ಜೊತೆಗೆ ಕಳೆದ ಮಾರ್ಚ್‌‌ನಲ್ಲಿ ದೇವರಾಜೇಗೌಡ ವಿರುದ್ದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಸನ ನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರು ಹಾಗೂ 2017 ರಲ್ಲಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ಮುಗಿದ ಕೂಡಲೇ ದೇವರಾಜೇಗೌಡರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

Post a Comment

0 Comments