ಹಾಸನ : ಕೂಲಿ ಕೆಲಸಕ್ಕೆ ತರೆಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೋಳಿಸಿರುವ
ಘಟನೆ ಸಕಲೇಶಪುರ ತಾಲ್ಲೂಕಿನ ವಾಟೆಹಳ್ಳ ಗ್ರಾಮದಲ್ಲಿ ನಡೆದಿದೆ.
ದಿವಾಕರ್ ಶೆಟ್ಟಿ (60) ಗಾಯಗೊಂಡ ವ್ಯಕ್ತಿ
ಇಂದು ಬೆಳಿಗ್ಗೆ ದಿವಾಕರ್ ಶೆಟ್ಟಿ ಅವರು ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿ, ಕಾಲಿನಿಂದ ತುಳಿದು, ಬಲಗಾಲು ಮುರಿದು ಹಾಕಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು,ಗಾಯಾಳುವಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ತಂಡ ಭೇಟಿ, ಪರಿಶೀಲನೆ ನಡೆಸಿದೆ.
0 Comments