ಭಾರಿ ಮಳೆಗೆ ಧರೆಗುರುಳಿದ 39 ವಿದ್ಯುತ್ ಕಂಬ ಸೆಸ್ಕ್ ನಿಂದ ತ್ವರಿತ ಕಾರ್ಯಾಚರಣೆ



ಹಾಸನ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ 39 ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ಸೆಸ್ಕ್ ಕಾರ್ಯಪಾಲಕ ಇಂಜಿನೀಯರ್ ಅನ್ನಪೂರ್ಣಾ ಅವರು ಹೇಳಿದ್ದಾರೆ.
ಸಕಲೇಶಪುರ, ಬೇಲೂರು ಭಾಗದಲ್ಲಿ ಯತೇಚ್ಛ ಮಳೆ ಸುರಿಯುತ್ತಿದ್ದು ಹಲವು ಕಡೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.‌ ಅದರಿಂದ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲಲ್ಲೇ ಜೀವನ ಕಳೆಯುವಂತಾಗಿದೆ. 
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸುತ್ತಿರುವ ಸೆಸ್ಕ್ ನೌಕರರು ತ್ವರಿತ ಕಾರ್ಯಾಚರಣೆ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ. ಸದ್ಯ ಯಾವ ಗ್ರಾಮದಲ್ಲೂ ವಿದ್ಯುತ್ ಸಂಪರ್ಕ ಕಡಿತಗೊಂಡಿಲ್ಲ ಎಂದರು.

Post a Comment

0 Comments