ಸೆ* ಗೆ ಹುಡುಗಿಯರು ಬೇಕಾ ಎಂದು ಆಮಿಷ ಒರ್ವ ಅಪ್ರಾಪ್ತ ಬಾಲಕಿ ಸೇರಿ 8 ವ್ಯಕ್ತಿಗಳ ಮೋಸ. ಕೊಡಗು ಪೊಲೀಸರಿಂದ ಕಾರ್ಯಾಚರಣೆ. ಆರೋಪಿಗಳ ಬಂಧನ

*ಹಾಸನ / ಕೊಡಗು : ಹುಡುಗಿ ಬೇಕಾ ಎಂದು ಆಮಿಷ.* 
 • 8 ವ್ಯಕ್ತಿಗಳ ಮೋಸ. ಪೊಲೀಸರಿಂದ* *ಕಾರ್ಯಾಚರಣೆ.* **ಆರೋಪಿಗಳ ಬಂಧನ* .
 * ಪೋಲಿಸ್ ವರಿಷ್ಠಾಧಿಕಾರಿ ಮಾಹಿತಿ :
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿ ನಿವಾಸಿ ಮಂಜು ಎಂಬುವವರು ದಿನಾಂಕ: 29-06-2024 ರಂದು ಮೊಬೈಲ್ ನಲ್ಲಿರುವ Locanto App ನಲ್ಲಿ *Kushalnagar Top Model Se*y Aunties Service Available Kushalnagar* - 23 0 35 ಸೈಟ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಒಬ್ಬ ವ್ಯಕ್ತಿ ಮಾತನಾಡಿ ನಾನು ಕುಶಾಲನಗರದ ಕಾಳೇಘಾಟ್ ಲಾಡ್ಜ್ ಮೇನೇಜರ್ ಎಂಬುದಾಗಿ ಪರಿಚಯಿಸಿಕೊಂಡು ಲಾಡ್ಜ್‌ನಲ್ಲಿ ಹೆಂಗಸರಿಂದ ಸೆ*/ಮಸಾಜ್ ಮಾಡಿಸಲಾಗುವುದು ಹಾಗೂ ಆನ್‌ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಹೆಂಗಸರ ಏರ್ಪಾಡು ಮಾಡಲಾಗುವುದು ಎಂದು ತಿಳಿಸಿದ. 
 ದೂರುದಾರರ Whatsapp ಗೆ ಕೆಲವು ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿ ಕೊಟ್ಟು ಒಂದು ಗಂಟೆಗೆ ರೂ. 1500/- ಮತ್ತು ಒಂದು ರಾತ್ರಿಗೆ ರೂ. 4000/- ಗಳ ಹಣ ನೀಡಬೇಕಾಗುವುದು ಎಂದು ಹೇಳಿದ.
ದೂರುದಾರರೂ ಗೂಗಲ್ ಪೇ ಮುಖಾಂತರ ರೂ. 1500/- ಹಣವನ್ನು ಕಳುಹಿಸಿದ್ದು, ಅದೇ ವ್ಯಕ್ತಿ ಕರೆ ಮಾಡಿ ಕಾಳೇಘಾಟ್ ಲಾಡ್ಜ್ ಬಳಿ ಬಂದು ಲೋಕೇಷನ್ ಕಳುಹಿಸುವಂತೆ ಮತ್ತು ಯಾವ ಬಣ್ಣದ ಬಟ್ಟೆ ಹಾಕಿದ್ದೀರಾ ಎಂದು ತಿಳಿಸುವಂತೆ ಹೇಳಿದ.
 ಆ ವ್ಯಕ್ತಿಯು ಹೇಳಿರುವಂತೆ ಕಾಳೇಘಾಟ್ ಲಾಡ್ಜ್‌ನ ಬಳಿ ಹೋಗಿ ಕರೆ ಮಾಡಿದಾಗ ಪುನಃ ಆನ್‌ಲೈನ್‌ನಲ್ಲಿ ಹಣ ಹಾಕಬೇಕು ಎಂದು ಹೇಳಿದ್ದರಿಂದ ಅನುಮಾನ ಬಂದು ಕಾಳೇಘಾಟ್ ಲಾಡ್ಜ್ ಗೆ ತೆರಳಿ ರಿಸೆಪ್‌ಶನ್‌ನಲ್ಲಿ ಈ ಮೇಲಿನ ವಿಚಾರ ಹೇಳಿದಾಗ ಆ ತರಹದ ಯಾವುದೇ ರೀತಿಯ ಅವ್ಯವಹಾರ ಇರುವುದಿಲ್ಲ ಹಾಗೂ ಇದೇ ವಿಚಾರ ಹೇಳಿಕೊಂಡು 3-4 ಜನ ಬಂದಿದ್ದರು ನಿಮಗೆ ಯಾರೋ ಮೋಸ ಮಾಡಿದ್ದಾರೆ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಅಲ್ಲಿ ತಿಳಿಸಿರುತ್ತಾರೆ.
ಅದರಂತೆ ಅಪರಿಚಿತ ವ್ಯಕ್ತಿಗಳು ಕಾಳೇಘಾಟ್ ಹೋಟೇಲ್ ಮತ್ತು ಲಾಡ್ಜ್ ಮೇನೇಜರ್ ಎಂದು ಹೆಸರು ಹೇಳಿಕೊಂಡು ಲಾಡ್ಜ್‌ನಲ್ಲಿ ಹೆಂಗಸರಿಂದ ಸೆ* ಮಸಾಜ್ ಮಾಡಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚನೆ ಮಾಡಿರುವವರನ್ನು ಪತ್ತೆಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದಿನಾಂಕ: 29-06-2024 ರಂದು ದೂರು ಸ್ವೀಕರಿಸಿದ್ದು, ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ 66(ಸಿ), 66 (ಡಿ) ಐಟಿ ಆಕ್ಟ್ & 419, 420, 468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು 
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಆರ್.ವಿ. ಗಂಗಾಧರಪ್ಪ, ಡಿವೈಎಸ್‌ಪಿ, ಸೋಮವಾರಪೇಟೆ ಉಪವಿಭಾಗ, ಪ್ರಕಾಶ್.ಬಿ.ಜಿ, ಪಿಐ, ಚಂದ್ರಶೇಖರ್.ಹೆಚ್.ಎ, ಪಿಎಸ್‌ಐ & ಹೆಚ್.ಟಿ.ಗೀತಾ, ಪಿಎಸ್‌ಐ ಕುಶಾಲನಗರ ನಗರ ಪೊಲೀಸ್ ಠಾಣೆ ಹಾಗೂ ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ & ಸಾಕ್ಷಾಧರಗಳನ್ನು ಕಲೆಹಾಕಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 06-07-2024 ರಂದು ಹಾಸನ ಜಿಲ್ಲೆ ಮೂಲದ 08 ಜನ ಆರೋಪಿಗಳನ್ನು ಬೆಂಗಳೂರುನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
*ಆರೋಪಿಗಳ ವಿವರ;* 
1. ಮಂಜನಾಥ, 29 ವರ್ಷ, ಸುಳ್ಳಕ್ಕಿ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ.
2. ಸಂದೀಪ್ ಕುಮಾರ್.ಸಿ.ಎಸ್, 25 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ.
3. ರಾಕೇಶ್.ಸಿ.ಬಿ, 24 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ.
4. ಜಯಲಕ್ಷ್ಮೀ.ಕೆ, 29 ವರ್ಷ, ಚಿಕ್ಕ ಸತ್ತಿಗಾಲ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ. 5. ಸಹನ.ಎಸ್, 19 ವರ್ಷ, ರಾಮನಗರ ಗ್ರಾಮ ಬೇಲೂರು ತಾ||, ಹಾಸನ ಜಿಲ್ಲೆ. 6. ಪಲ್ಲವಿ, 30 ವರ್ಷ, ರಾಮನಗರ ಗ್ರಾಮ, ಬೇಲೂರು ತಾ||, ಹಾಸನ.
5. ಸಹನ.ಎಸ್, 19 ವರ್ಷ, ರಾಮನಗರ ಗ್ರಾಮ ಬೇಲೂರು ತಾ||, ಹಾಸನ ಜಿಲ್ಲೆ.
6. ಪಲ್ಲವಿ, 30 ವರ್ಷ, ರಾಮನಗರ ಗ್ರಾಮ, ಬೇಲೂರು ತಾ||, ಹಾಸನ ಜಿಲ್ಲೆ.
7. ಅಭಿಷೇಕ್, 24 ವರ್ಷ, ಇರಗಲ್ ಗ್ರಾಮ, ಸಕಲೇಶಪುರ ತಾ||, ಹಾಸನ ಜಿಲ್ಲೆ 
8. ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕಿ. ( ಹೆಸರು ನಮೂದಿಸಲಾಗುವುದಿಲ್ಲ )
 *ವಶಪಡಿಸಿಕೊಂಡ ಸ್ವತ್ತುಗಳ ವಿವರ:* 
1. 2 - ಕಾರು
2. 17 -ಮೊಬೈಲ್
3. 1 -- ಟ್ಯಾಬ್
4. 1 - ಲ್ಯಾಪ್‌ಟಾಪ್
5. ನಗದು ರೂ. 24,800/-
ಸದರಿ ಆರೋಪಿಗಳು ಕರೆ ಮಾಡಿದ ವ್ಯಕ್ತಿಗಳ ಊರಿನಲ್ಲಿರುವ ಲಾಡ್ಜ್‌ನ ಹೆಸರು ಹೇಳಿಕೊಂಡು ಹಲವು ಜನರಿಗೆ ವಂಚಿಸಿ ರೂ. 3 ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.
ಸದರಿ ಪ್ರಕರಣದ ಆರೋಪಿಗಳನ್ನು ಬಂದಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.
 *ಗಮನಿಸಿ ವಿಶೇಷ ಸೂಚನೆ:* ಅಂತರ್ಜಾಲದಲ್ಲಿ ಮಹಿಳೆಯರಿಂದ ಸೆ*/ಮಸಾಜ್ /ವೇ*ವಾಟಿಕೆ ಸೇವೆಗಳು ಲಭ್ಯ ಎಂಬುದಾಗಿ ಮೊಬೈಲ್ ಸಂಖ್ಯೆಯನ್ನು ನೀಡಿ ಕರೆ ಮಾಡುವಂತೆ ಸೃಷ್ಠಿಸಿರುವ ವೆಬ್ ಸೈಟ್‌ಗಳನ್ನು ಬಳಸಿ ವಂಚನೆಗೆ ಒಳಗಾಗದಂತೆ ಸಾರ್ವಜನಿಕರಲ್ಲಿ ಕೋರಿದೆ ಮತ್ತು ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡುವ ರೀತಿಯ ಯಾವುದೇ ರೀತಿಯ ಅನೈತಿಕ ಅಕ್ರಮ ಚಟುವಟಿಕೆಗಳು ನಡೆಸುತ್ತಿರುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತ್ತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. #karnatakapolice #kodagunews #hassannewstoday

Post a Comment

0 Comments