ಪಿಡಿಒ, ಆರ್ ಒಗೆ ಬಂದೂಕು ತೋರಿಸಿದ ಅಪ್ಪ-ಮಗ

 


ಪಿಡಿಒ, ಆರ್ ಒಗೆ ಬಂದೂಕು ತೋರಿಸಿದ ಅಪ್ಪ-ಮಗ



ಬೇಲೂರು : ಕೆರೆ ಜಾಗದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರಿಂದ ಸ್ಥಳ ಸರ್ವೆಗೆ ಬಂದಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗು ಇತರ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಮಾತ್ರವಲ್ಲದೆ ಬಂದೂಕು ತೋರಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಮೇದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್‌‍.ಆರ್‌.ಸಂತೋಷ್‌, ರಾಜಸ್ವ ನಿರೀಕ್ಷಕರಿಗೆ ಗ್ರಾಮದ ಕೆ.ಪಿ.ಯೋಗಾನಂದ ಹಾಗು ಆತನ ತಂದೆ ಪದಾಕ್ಷೆಗೌಡ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ತಹಶೀಲ್ದಾರ್‌ ಅವರ ನಿರ್ದೇಶನದಂತೆ ಅಧಿಕಾರಿಗಳು ಬಳ್ಳೂರು ಗ್ರಾಮದ ಸರ್ವೆ ನಂ. 136ರ ಕೆರೆಯ ಪಕ್ಕದ ಜಮೀನಿನಲ್ಲಿ ಸರ್ವೆಗಾಗಿ ಅಧಿಕಾರಿಗಳು ಬಂದಿದ್ದರು. ಸ್ಥಳಕ್ಕೆ ಬಂದ ತಂದೆ ಹಾಗು ಮಗ ಸರ್ವೆ ಮಾಡದಂತೆ ವಾಗ್ವಾದ ಮಾಡಿ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ. ಪ್ರಾಣ ಭಯದಿಂದ ಅಧಿಕಾರಿಗಳು ಓಡಾಡಿದ್ದು ನಂತರ ಬಂದೂಕು ತೋರಿಸಿ ಹೆದರಿಸಿದ್ದಾರೆ. ಸರ್ವೆ ತಂಡ ಕೆಲಸ ಸ್ಥಗಿತಗೊಳಿಸಿ ವಾಪಾಸ್ಸಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments