ಚಿರತೆ ದಾಳಿ: ಕುರಿಗಾಹಿಗೆ ಗಾಯ

ಚಿರತೆ ದಾಳಿಯಿಂದ ಕುರಿಗಾಹಿಗೆ ಗಾಯ


ಬೇಲೂರು: ತಾಲ್ಲೂಕಿನ ವೀರದೇವನಹಳ್ಳಿಯಲ್ಲಿ ಚಿರತೆ ದಾಳಿಗೆ ಕುರಿಗಾಹಿ ಗಾಯಗೊಂಡಿರುವ ಘಟನೆ ನಡೆದಿದೆ. 

ಲೋಕೇಶ್(48) ಗಾಯಾಳು. ಜಮೀನಿನಲ್ಲಿ‌ ಕುರಿ ಮೇಯಿಸುವ ಸಂದರ್ಭದಲ್ಲಿ ಏಕಾಏಕಿ ಬಂದ ಚಿರತೆ ದಾಳಿ ನಡೆಸಿದೆ. ಲೋಕೇಶ್ ಕೈಯಲಿದ್ದ ದೊಣ್ಣೆಯಿಂದ ಹೊಡೆದು ದೂಕಿದಾಗ ಕುರಿಯನ್ನು ಕಚ್ಚಿ ಹೊತ್ತುಕೊಂಡು ಹೋಗಿದೆ. ಲೋಕೇಶ್ ಅವರಿಗೆ ತಲೆ ಮತ್ತು ಕಿವಿ ಭಾಗಗಳಲ್ಲಿ ಗಾಯಾಗಳಾಗಿದ್ದು, ಬೇಲೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಮ್ಮ ಭಾಗದಲ್ಲಿ ಆಗಾಗ ಚಿರತೆ ಕಾಣಿಸುತ್ತಿವೆ. ನಾನು ಕೆಳಗೆ ಬಿದ್ದಿದ್ದರೆ ಬದುಕುತ್ತಿರಲಿಲ್ಲ ಎಂದು  ಗಾಯಾಳು ಲೋಕೇಶ್ ಹೇಳಿದ್ದಾರೆ.

ವಲಯ ಅರಣ್ಯಾಧಿಕಾರಿ ಯತೀಶ್ ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದರು.


Post a Comment

0 Comments