ಪ್ರೇಯಸಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಅಂದರ್
ಹಾಸನ: ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಭಗ್ನ ಪ್ರೇಮಿಯನ್ನು ಪೊಲೀಸರು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಲೂರು ತಾಲ್ಲೂಕಿನ ಕಾರಗೋಡು ಗ್ರಾಮದ ಮೋಹಿತ್ ಆರೋಪಿ. ಸೋಮವಾರ ಸಂಜೆ ಪಟ್ಟಣದಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತನನ್ನು ಮೈಸೂರು ಜಿಲ್ಲೆಯ ಭೇರ್ಯದಲ್ಲಿ ವಶಕ್ಕೆ ಪಡೆಯಲಾಗಿದೆ.
ಆತನ ಮೊಬೈಲ್ ಟ್ರ್ಯಾಕ್ ಆಧರಿಸಿ ಬೆನ್ನಟ್ಟಿದ್ದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಗಂಗಾಧರ್, ಕಾನ್ಸಟೇಬಲ್‌ಗಳಾದ ರಾಕೇಶ್, ಸೋಮಶೇಖರ್ ಇದ್ದರು.

0 Comments