ಶಾಸಕನಾಗುವ ಅವಕಾಶಗಳಿದ್ದರೂ ತ್ಯಜಿಸಿದ್ದೇನೆ
ಹಾಸನ: ನಾನು ಶಾಸಕನಾಗಲು, ಸಂಸದನಾಗಲು ಎಂದೂ ಹಪಾಹಪಿ ಮಾಡಿಲ್ಲ. ರಾಜಕಾರಣವೇ ನನ್ನ ಉದ್ದೇಶ ಆಗಿದ್ದರೆ ಚಿತ್ರರಂಗಕ್ಕೆ ಹೋಗುತ್ತಿರಲಿಲ್ಲ. ಒಂದು ಒಳ್ಳೆಯ ಉದ್ದೇಶಕ್ಕೆ ರಾಜಕಾರಣ ಪ್ರವೇಶಿಸಿದ್ದೇನೆಂದು ಚನ್ನಪಟ್ಟಣ ಉಪಚುನಾವಣೆ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಅರಕಲಗೂಡಿನಲ್ಲಿ ಹಮ್ಮಿಕೊಂಡಿದ್ದ ಶಾಸಕ ಎ.ಮಂಜು ಹುಟ್ಟು ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಸೋತ ಮಾತ್ರಕ್ಕೆ ಮೂಲೆಲಿ ಕೂರುವ ಜಾಯಮಾನ ನನ್ನದಲ್ಲ. ನನಗಿನ್ನು ವಯಸ್ಸು 36. ಪಕ್ಷ ಸಂಘಟನೆಯೇ ನನ್ನ ಆದ್ಯತೆ ಎಂದು ಹೇಳಿದರು.
ಚುನಾವಣೆಯಲ್ಲಿ ಏಳು ಬೀಳು ಸಾಮಾನ್ಯ. ನನ್ನ ಜೀವನದ ಸ್ಪೂರ್ತಿ ದೇವೇಗೌಡರು. ಅನಿರೀಕ್ಷಿತ ಬೆಳವಣಿಗೆಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿ ಬಂತು. ಸೋಲಿನ ಬಗ್ಗೆ ಪರಾಮರ್ಶೆ ಮಾಡುವುದಿಲ್ಲ. ಬಹಳ ಸುಲಭವಾಗಿ ಶಾಸಕನಾಗುವ ಅಖಾಡ ಬಹಳ ಸಲ ಸೃಷ್ಟಿಯಾಗಿತ್ತು. ಆದರೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ನಿಷ್ಟಾವಂತನಾಗಿ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದರು.

0 Comments