ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಡಾ. ಆಶಾ, ಡಾ. ಲೋಕೇಶ್ ಅವರು ಹುದ್ದೆಯಲ್ಲಿದ್ದರು. ಆ ಸ್ಥಾನಕ್ಕೆ ಡಾ. ಆಶಾ ಅವರನ್ನು ನಿಯೋಜಿಸಲಾಗಿದೆ.


ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಡಾ. ಆಶಾ ನಿಯೋಜನೆ

ಹಾಸನ : ಜಿಲ್ಲಾ ಶಸ್ತ್ರ ಚಿಕಿತ್ಸಕರನ್ನಾಗಿ ಡಾ॥ ಆಶಾ ಅವರನ್ನು ನಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಶುಭಂ ಶುಕ್ಲ ಅವರು ಆದೇಶ ಹೊರಡಿಸಿದ್ದಾರೆ.

ಡಾ॥ ಆಶಾ ಅವರು ಮೈಸೂರಿನ ಮೇಟಗಳ್ಳಿಯ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಡ್ಯ ಜಿಲ್ಲಾ ಆರ್‌ಸಿಹೆಚ್‌ ಅಧಿಕಾರಿಯಾಗಿದ್ದ ಡಾ॥ ಅನಿಲ್‌ಕುಮಾರ್‌ ಅವರನ್ನು ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ವರ್ಗಾವಣೆ ಮಾಡಲಾಗಿದೆ. 

ಈ ವರೆಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಡಾ॥ ಲೋಕೇಶ್‌ ಅವರು ಹೆಚ್ಚುವರಿ ಕಾರ್ಯನಿರ್ವಹಿಸುತ್ತಿದ್ದರು. ಆ ಸ್ಥಾನಕ್ಕೆ ಡಾ॥ ಆಶಾ ಅವರನ್ನು ಸರ್ಕಾರ ನಿಯೋಜಿಸಿರುವ ಹಿನ್ನಲೆಯಲ್ಲಿ ಲೋಕೇಶ್‌ ಅವರು ಹಿಮ್ಸೌ ನ ಅಸೋಸಿಯೇಟ್‌ ಪ್ರೋಫೆಸರ್‌ ಹಾಗು ಮೆಡಿಸಿನ್‌ ಡಿಪಾರ್ಟ್‌ಮೆಂಟ್‌ ಯೂನಿಟ್‌ ಹೆಡ್‌ ಆಗಿ ಕರ್ತವ್ಯ ಮುಂದುವರಿಸಲಿದ್ದಾರೆ.


Post a Comment

0 Comments