ಟೈಯರ್ ಸಿಡಿದು ಪೊಲೀಸ್ ಜೀಪ್ ಜಖಂ

ಪ್ರೋಬೆಷನರಿ ಐಪಿಎಸ್ ಅಧಿಕಾರಿಗೆ ಗಂಭೀರ ಗಾಯ




ಹಾಸನ: ಟೈಯರ್‌ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್‌‍ ಜೀಪ್‌ ಪಕ್ಕದ ಮನೆಗೆ ಡಿಕ್ಕಿ ಮಾಡಿದ ಪರಿಣಾಮ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪ್ರೋಬೆಷನರಿ ಐಪಿಎಸ್‌‍ ಅಧಿಕಾರಿ ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕಿತ್ತಾನೆ ಗಡಿ ಬಳಿ ಭಾನುವಾರ ನಡೆದಿದೆ.

ಮಹಾರಾಷ್ಟ್ರ ಮೂಲದ ಪ್ರೊಬೇಷನರಿ ಐಪಿಎಸ್‌‍ ಅಧಿಕಾರಿ ಹರ್ಷವರ್ಧನ್‌ ಗಾಯಾಳು. ಜೀಪ್‌ ಚಾಲಕ, ಹಾಸನದ ಡಿಎಆರ್‌ ಕಾನ್ಸಟೇಬಲ್‌ ಮಂಜೇಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಘಡದಲ್ಲಿ ಜೀಪ್ ಸಂಪೂರ್ಣ ಜಖಂಗೊಂಡಿದೆ. 

Post a Comment

0 Comments