ಅಪರೂಪದ ಅಟ್ಲಾಸ್‌‍ ಪತಂಗ ಪ್ರತ್ಯಕ್ಷ

ಅಪರೂಪದ ಅಟ್ಲಾಸ್‌‍ ಪತಂಗ ಗೋಚರ 



ಸಕಲೇಶಪುರ: ದಟ್ಟ ಅರಣ್ಯದಲ್ಲಿ ಕಾಣಸಿಗುವ ಅಪರೂಪದ ಅಟ್ಲಾಸ್‌‍ ಪತಂಗ ಪಟ್ಟಣದ ಆಜಾದ್‌ ರಸ್ತೆಯಲ್ಲಿರುವ ಬದ್ರಿಯಾ ಜುಮಾ ಮಸ್ಜಿದ್‌ ಆವರಣದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಸಾಮಾನ್ಯವಾಗಿ ಅರಣ್ಯದಲ್ಲಿ ಪ್ರತ್ಯಕ್ಷವಾಗುವ ವಿಶೇಷ ಪ್ರಭೇದದ ಈ ಚಿಟ್ಟೆ ಜನನಿಬೀಡ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಪಶ್ಚಿಮಘಟ್ಟದಲ್ಲಿ ಕಂಡುಬರುವ ಚಿಟ್ಟೆಗಿಂತ ಗಾತ್ರದಲ್ಲಿ ದೊಡ್ಡದಾದ ಅಪರೂಪದ ಪತಂಗ ಇದಾಗಿದೆ. ದಟ್ಟ ಅರಣ್ಯದಲ್ಲೇ ವಾಸವಿರುವ ಇದು ನೋಡಲು ಅತ್ಯಾಕರ್ಷಕವಾಗಿರುತ್ತದೆ. 

ಈ ಬಗ್ಗೆ ಪರಿಸರ ಪ್ರೇಮಿ ಬಿ.ಎಸ್‌‍.ದೇಸಾಯಿ ಅವರು ಮಾತನಾಡಿ, ಪಶ್ಚಿಮಘಟ್ಟದಲ್ಲಿ ಅಟ್ಲಾಸ್‌‍ ಪತಂಗಗಳು ಇವೆಯಾದರೂ ಅರಣ್ಯ ಬಿಟ್ಟು ಜನವಸತಿ ಪ್ರದೇಶಕ್ಕೆ ಬರುವುದು ಅಪರೂಪ. ಇನ್ನೂ ಅನೇಕ ಬಗೆಯ ಕೀಟ ಪ್ರಭೇದವನ್ನು ನಾವು ಕಾಣಬಹುದು. ಇಂತಹ ಸೂಕ್ಷ್ಮ ಪ್ರಭೇದದ ಕೀಟಗಳು ಅವಸಾನ ಹೊಂದಿವೆ ಎನ್ನಲಾಗುತ್ತದೆಯಾದರೂ ಅವು ಆಗಾಗ ಪ್ರತ್ಯಕ್ಷವಾಗುವ ಮೂಲಕ ತಮ ಅಸ್ತಿತ್ವವನ್ನು ಸಾಬೀತುಪಡಿಸುತ್ತವೆ ಎಂದರು.

Post a Comment

0 Comments