ಸಾಲಬಾಧೆ ತಾಳಲಾರದೆ ಆತಹತ್ಯೆ

 ಸಾಲಬಾಧೆ ತಾಳಲಾರದೆ ಆತಹತ್ಯೆ 



ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಭಾನುವಾರ ಕ್ಯಾಂಟೀನ್‌ ಮಾಲೀಕ ಆತಹತ್ಯೆಗೆ ಶರಣಾಗಿದ್ದು ಸಾಲಬಾಧೆ ತಾಳಲಾರದೆ ಮೃತಪಟ್ಟಿರಬಹುದು ಎಂದು ಸಿಕ್ಕಿರುವ ಡೆತ್‌ನೋಟ್‌ನಿಂದ ಶಂಕಿಸಲಾಗಿದೆ.

ವಿವಿಧ ಬಗೆಯ ಚಹಾ ತಯಾರಿಕೆಯಿಂದ ಹೆಸರು ವಾಸಿಯಾಗಿದ್ದ ಉಪ್ಪಿ ಕ್ಯಾಂಟೀನ್‌ ಮಾಲೀಕ ಸುರೇಶ್‌ ಮೃತ ದುರ್ದೈವಿ. ಕ್ಯಾಂಟೀನ್‌ನಲ್ಲೇ ನೇಣಿಗೆ ಶರಣಾಗಿರುವ ಆತ, ಎರಡು ಪುಟಗಳ ಡೆತ್‌ ನೋಟ್‌ ಬರೆದಿದ್ದಾನೆ. ಸ್ನೇಹಿತರಿಗೆ ಯಾರಿಗಾದರೂ ಸಹಾಯ ಮಾಡಬೇಕು ಅನ್ನಿಸಿದರೆ ಬಡ್ಡಿ ಇಲ್ಲದೆ ಆರ್ಥಿಕ ಸಹಾಯ ಮಾಡಿ. ಯಾರು ಕೂಡ ಸಾಲ ಮಾಡಬೇಡಿ. ಸಾಲದಿಂದ ಬದುಕು ಹಾಳಾಗುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಇನ್ನೊಬ್ಬರ ಮುಂದೆ ರಾಜನಾಗಲು ಸಾಲ ಮಾಡಬೇಡಿ. ಅಮನಿಗೆ ಒಳ್ಳೆ ಮಗ ಆಗಲಿಲ್ಲ, ಹೆಂಡತಿಗ ಒಳ್ಳೆ ಗಂಡನಾಗಲಿಲ್ಲ, ಮಕ್ಕಳಿಗೆ ಒಳ್ಳೆಯ ತಂದೆಯಾಗಲಿಲ್ಲ. ಎಲ್ಲರೂ ನನ್ನನ್ನು ಕ್ಷಮಿಸಿ ಬಿಡಿ, ನನ್ನ ಸಾವಿಗೆ ಯಾರು ಹೊಣೆಗಾರರಲ್ಲ ಎಂದು ಬರೆದಿರುವ ಡೆತ್‌ ನೋಟ್‌ ಸಿಕ್ಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Post a Comment

0 Comments