10ನೇ ತರಗತಿಯ ಮೂರು ಮಕ್ಕಳು ನಾಪತ್ತೆ

10ನೇ ತರಗತಿಯ ಮೂರು ಮಕ್ಕಳು ನಾಪತ್ತೆ



ಹಾಸನ: ಶಾಲೆಗೆ ಹೋಗುವುದಾಗಿ ತೆರಳಿದ್ದ ಮೂವರು  ಮಕ್ಕಳು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಸಕಲೇಶಪುರ ತಾಲ್ಲೂಕು ಕುನಿಗನಹಳ್ಳಿ ಗ್ರಾಮದ ಶರತ್ (16), ಧನಂಜಯ್ (16), ಮುರುಳಿ (16) ಕಾಣಿಯಾಗಿರುವ 10 ನೇ ತರಗತಿ ವಿದ್ಯಾರ್ಥಿಗಳು.

ಮೂವರು ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದ ಹಿನ್ನಲೆಯಲ್ಲಿ ಪೋಷಕರಿಗೆ ಶಿಕ್ಷಕರು ಕರೆ ಮಾಡಿ ತಿಳಿಸಿದ್ದರು. ನಂತರ ತಮ್ಮ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.

ಶರತ್ ಬಳಿಯಿರುವ ಮೊಬೈಲ್ ಸಹ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಆತಂಕಗೊಂಡಿರುವ ಪೋಷಕರು ಸಕಲೇಶಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. 


Post a Comment

0 Comments