ಡಾ. ಶ್ರೀ ಬಾಲಗಂಗಾಧರನಾಥ ಶ್ರೀಗಳ 12ನೇ ಪುಣ್ಯಾರಾಧನೆ

ಡಾ. ಶ್ರೀ ಬಾಲಗಂಗಾಧರನಾಥ ಶ್ರೀಗಳ 12ನೇ ಪುಣ್ಯಾರಾಧನೆ



ಹಾಸನ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಭೈರವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 12ನೇ ಪುಣ್ಯಾರಾಧನೆಯನ್ನು ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. 

ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರ ಪಾವನ ಸಾನ್ನಿಧ್ಯದಲ್ಲಿ ಪೂಜಾ ವಿಧಿ ವಿಧಾನ ನೆರವೇರುತ್ತಿವೆ. 

ಬೆಳಿಗ್ಗೆ 6 ರಿಂದ ಮಹಾಗಣಪತಿಗೆ ಅಭಿಷೇಕ ಮತ್ತು ರಜತ ಕವಚಾಲಂಕಾರ ಹಾಗು ಆರಾಧನಾ ಕಾರ್ಯಕ್ರಮ ಪ್ರಾರಂಭವಾಯಿತು. ಮಹಿಳಾ ತಂಡದಿಂದ ಲಲಿತ ಸಹಸ್ರನಾಮ ನಡೆಯಿತು. ಸಂಜೆ ನಗರದ ಹೇಮಾವತಿ ಪ್ರತಿಮೆಯಿಂದ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗು ದಿವ್ಯ ಜ್ಯೋತಿ ಮೆರವಣಿಗೆ ನಡೆಯಲಿದೆ.

Post a Comment

0 Comments