ಜಿಲ್ಲೆಯ ಇಬ್ಬರಿಗೆ ಅತ್ಯುನ್ನತ ಪ್ರಶಸ್ತಿ

ಜಿಲ್ಲೆಯ ಇಬ್ಬರಿಗೆ ಅತ್ಯುನ್ನತ ಪ್ರಶಸ್ತಿ



ಹಾಸನ: ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಅರಕಲಗೂಡು ಸೂರ್ಯ ಪ್ರಕಾಶ್ ಅವರು ಪದ್ಮಭೂಷಣ ಹಾಗೂ ಚಲನಚಿತ್ರ ನಿರ್ಮಾಪಕ ಹಾಸನ ರಘು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ಪದ್ಮಶ್ರೀ ಹಾಗೂ ಪದ್ಮ ಭೂಷಣ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಅರಕಲಗೂಡು ಸೂರ್ಯ ಪ್ರಕಾಶ್ ಅವರು ಪ್ರಸಾರ ಭಾರತಿಗೆ ಎರಡನೇ ಬಾರಿ ಆಯ್ಕೆ ಆಗಿದ್ದರು.

ಮೈಸೂರು ವಿಶ್ವವಿದ್ಯಾಲಯದಿಂದ ಸೋಷಿಯಾಲಜಿಯಲ್ಲಿ ಮಾಸ್ಟರ್ಸ್ ಪದವಿ ಗಳಿಸಿರುವ ಅವರು ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಹೊಂದಿದ್ದಾರೆ. What Ails Indian Parliament (HarperCollins, 1995) ಎಂಬ ಪುಸ್ತಕವನ್ನು ಬರೆದಿದ್ದಾರೆ. 

ಸೂರ್ಯ ಪ್ರಕಾಶ್ ಅರಕಲಗೂಡು ಪಟ್ಟಣದವರಾಗಿದ್ದು, ದಶಕಗಳ ಹಿಂದೆಯೇ ಉದ್ಯೋಗದ ಸಲುವಾಗಿ ಕುಟುಂಬ ಪಟ್ಟಣವನ್ನು ತೊರೆದಿದೆ. ಆದರೆ ಹುಟ್ಟೂರಿನ ನೆನಪಿನಲ್ಲಿ ಸೂರ್ಯಪ್ರಕಾಶ್ ಪಟ್ಟಣಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ ಹಾಗೂ ಹುಟ್ಟೂರಿನ ನೆನಪಿಗಾಗಿ ಹೆಸರಿನ ಮುಂದೆ ಅರಕಲಗೂಡು ಹೆಸರನ್ನು ಇಟ್ಟುಕೊಂಡಿದ್ದಾರಲ್ಲದೇ ತಮ್ಮ ಮಕ್ಕಳ ಹೆಸರಿನ ಮೊದಲಿಗೆ ಅರಕಲಗೂಡು ಹೆಸರನ್ನು ಸೇರ್ಪಡೆ ಮಾಡಿಕೊಂಡಿರುವುದು ಹುಟ್ಟೂರಿನ ಪ್ರೀತಿಗೆ ಸಾಕ್ಷಿಯಾಗಿದೆ.


Post a Comment

0 Comments