ಕೆ.ಆರ್. ಚಂದ್ರಪ್ಪಗೆ ಶರಣ ಸಂಕುಲ ರತ್ನ ಪ್ರಶಸ್ತಿ
ಹಾಸನ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಕುಣಿಗಲ್ ತಾಲ್ಲೂಕು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹಮಿಕೊಂಡಿದ್ದ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮೇಳನದಲ್ಲಿ ನಗರದ ಶ್ರೀ ರಾಘವೇಂದ್ರ ಪ್ರಿಂಟರ್ಸ್ ಮಾಲೀಕ ಕೆ.ಆರ್.ಚಂದ್ರಪ್ಪ ಅವರಿಗೆ 2024ನೇ ಸಾಲಿನ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಬುರಗಿ ಜಿಲ್ಲೆಯ ಆಳಂದ ತೋಂಟದಾರ್ಯ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ, ಸಮೇಳನ ಸರ್ವಾಧ್ಯಕ್ಷ ರಂಜಾನ್ ದರ್ಗಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್, ರಾಜ್ಯ ಉಪಾಧ್ಯಕ್ಷ ಟಿ.ಸತೀಶ್ ಜವರೇಗೌಡ, ಸಾಹಿತಿ ಡಾ. ಬಿ.ಸಿ.ಶೈಲಾ ನಾಗರಾಜ್, ಪ್ರಸಿದ್ಧ ಚಲನಚಿತ್ರ ನಟ ಡಾ. ಚಿಕ್ಕ ಹೆಜ್ಜಾಜಿ ಮಹಾದೇವ ಇತರರಿದ್ದರು.

0 Comments