ಮಹಿಳೆ ಅನುಮಾನಾಸ್ಪದ ಸಾವು

ಮಹಿಳೆ ಅನುಮಾನಾಸ್ಪದ ಸಾವು










ಹಾಸನ:
ವಿವಾಹಿತ ಮಹಿಳೆಯ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಆಕೆಯ ಪತಿಯೇ ಹತ್ಯೆಗೈದು ಕೆರೆಗೆ ಎಸೆದಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಆಲೂರು ತಾಲ್ಲೂಕು ತಿಪ್ಪನಹಳ್ಳಿ ಗ್ರಾಮದ ಸಾಕಮ್ಮ (37) ಮೃತ ದುರ್ದೈವಿ. ಪತಿ ಮಂಜುನಾಥ್‌ ಎಂಬಾತನ ಮೇಲೆ ಆರೋಪ ಕೇಳಿಬಂದಿದ್ದು ತಾಲ್ಲೂಕು ಆಸ್ಪತ್ರೆ ಎದುರು ಸಾಕಮ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಹದಿನೆಂಟು ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ನಿನ್ನೆ ದಂಪತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Post a Comment

0 Comments