ಫೆ. 13 ರಿಂದ ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಸಮಾರಂಭ

ಫೆ. 13 ರಿಂದ ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಸಮಾರಂಭ



ಹಾಸನ: ಸಕಲೇಶಪುರದಲ್ಲಿ ಫೆ. 13 ರಿಂದ 15ರ ವರೆಗೆ ಗುರು ತೋರಿದ ತಿಂಗಳ ಮಾಮನ ತೇರು ಶತೋತ್ತರ ರಜತ ಹುಣ್ಣಿಮೆ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿದ ಶ್ರೀಗಳು, ಪ್ರತಿ ತಿಂಗಳು ಹಾಸನದಲ್ಲಿ ಹುಣ್ಣಿಮೆ ಕಾರ್ಯಕ್ರಮ ಮಾಡುತ್ತೇವೆ. ವಾರ್ಷಿಕ ಹುಣ್ಣಿಮೆಯನ್ನು ತಾಲ್ಲೂಕು ಕೇಂದ್ರದಲ್ಲಿ ಮಾಡುತ್ತಿದ್ದೆವು. ರಜತ ಹುಣ್ಣಿಮೆಯನ್ನು ಚನ್ನರಾಯಪಟ್ಟಣ, ಸುವರ್ಣ ಹುಣ್ಣಿಮೆಯನ್ನು ಹಾಸನ, ಅಮೃತ ಹುಣ್ಣಿಮೆಯನ್ನು ಬೇಲೂರಿನಲ್ಲಿ ಹಾಗು ಅರಕಲಗೂಡಿನಲ್ಲಿ ಶತಮಾನೋತ್ಸವ ಮಾಡಿದ್ದೇವೆ. ಶತೋತ್ತರ ರಜತ ಹುಣ್ಣಿಮೆ ಕಾರ್ಯಕ್ರಮವನ್ನು ಸಕಲೇಶಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಕಲೇಶಪುರದಲ್ಲಿ 8 ಎಕರೆಯನ್ನು ಶ್ರೀ ಮಠಕ್ಕಾಗಿ ಮೀಸಲಿಡಲಾಗಿದೆ. ಶ್ರೀ ಮಠದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಗುರುವಂದನೆ, ರಜತ ತುಲಾಭಾರ ಇದೆ. ಹೇಮಾವತಿ ನದಿಯ ಹೊಳೆಮಲ್ಲೇಶ್ವರ ದೇವಾಲಯ ಸಮೀಪ ಗಂಗಾರತಿ ಏರ್ಪಡಿಸಲಾಗಿದೆ. 

ಫೆ. 14ರಂದು ಬೆಳಿಗ್ಗೆ 8.30ಕ್ಕೆ ಮಠದ ಕಟ್ಟಡ ಕಾಮಗಾರಿ ಭೂಮಿಪೂಜೆ ನೆರವೇರಲಿದೆ. ಬೆ. 9.30ಕ್ಕೆ ಪ್ರತಿಮೆ ಅನಾವರಣ, ನಂತರ 1008 ಕಳಸಗಳೊಂದಿಗೆ ಶ್ರೀಗಳನ್ನು ಭಕ್ತಿ ಪೂರ್ವಕವಾಗಿ ವೇದಿಕೆಗೆ ಕರೆತರಲಾಗುವುದು ಎಂದರು. 

ಅದೇ ದಿನ ಸಂಜೆ ಬಿಜಿಎಸ್ ಬೆಳದಿಂಗಳೋತ್ಸವ ನಡೆಯಲಿದೆ. ಫೆ. 15ರಂದು ರಾಜ್ಯ ಮಟ್ಟದ ಕೃಷಿ ಮೇಳ ನಡೆಸಲಾಗುವುದು ಎಂದು ತಿಳಿಸಿದರು. 

ರೈತರಿಗೆ ಮಾಹಿತಿ ನೀಡಲು ಕೃಷಿ ತಜ್ಣರು ಬರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. 

ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಒಕ್ಕಲಿಗ ಸಂಘದ ಜಿಲ್ಲಾ ನಿರ್ದೇಶಕ ಬೈರಮುಡಿ ಚಂದ್ರು ಇದ್ದರು. 

Post a Comment

0 Comments