ಬುದ್ದಿಮಾಂಧ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 2 ಮಕ್ಕಳ ತಂದೆ
ಹಾಸನ: ಬುದ್ದಿಮಾಂಧ್ಯ ಬಾಲಕಿ ಮೇಲೆ ವಿಕೃತ ಕಾಮುಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಬೇಲೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಬಾಲಕಿಯ ಪಕ್ಕದ ಮನೆಯ ವ್ಯಕ್ತಿಯೇ ಕೃತ್ಯ ಎಸಗಿದ್ದು ಆತನಿಗೆ ಇಬ್ಬರು ಮಕ್ಕಳಿದ್ದಾರೆ.
ತಂದೆ-ತಾಯಿ ಸಂಬಂಧಿಕರೊಬ್ಬರ ಬೀಗರ ಊಟಕ್ಕೆ ಹೋಗಿದ್ದ ಸಮಯವನ್ನೇ ಕಾದು ಕುಳಿತಿದ್ದ ಕಾಮುಕ ಬಾಲಕಿ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡು ಮನೆಗೆ ಪ್ರವೇಶಿಸಿದ್ದಾನೆ.
ಚಾಕಲೆಟ್ ಕೊಡುವ ನೆಪದಲ್ಲಿ ಬಾಲಕಿ ಯನ್ನು ಮಾತನಾಡಿಸಿ ಅತ್ಯಾಚಾರ ಎಸಗಿದ್ದಾನೆ. ಸಂಜೆ ಪೋಷಕರು ಮನೆಗೆ ಬಂದಾಗ ಹುಡುಗಿಯ ಆರೋಗ್ಯ ಸರಿಯಿಲ್ಲದಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ತಿಳಿದಿದೆ.
ವಿಷಯ ಪೋಷಕರಿಗೆ ತಿಳಿಯುತ್ತಿದ್ದಂತೆ ಮನೆಯ ಹಿಂಬಾಗಿಲಿನಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಹಳೇಬೀಡು ಠಾಣೆ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

0 Comments