ಹಗ್ಗ ಕತ್ತರಿಸಲು ಹೋದ ವ್ಯಕ್ತಿ ಸಾವು! ಆಗಿದ್ದೇನು?
ಆಲೂರು: ಹುಲ್ಲು ತುಂಬಿದ್ದ ಟ್ರ್ಯಾಕ್ಟರ್ ಟ್ರೇಲರ್‌ಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಲು ಯತ್ನಿಸಿದ ವ್ಯಕ್ತಿಗೆ ಬೆಂಕಿ ತಾಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಿರಗಡಲು ಸಮೀಪ ನಡೆದಿದೆ.
ಹೊಳೆನರಸೀಪುರ ತಾಲ್ಲೂಕು ಹನುಮನಹಳ್ಳಿ ಗ್ರಾಮದ ರಂಗಸ್ವಾಮಿ (40) ಮೃತರು. ಜ. 30 ರಂದು ಗ್ರಾಮದ ಕಿರಣ್ ಎಂಬುವವರ ಜೊತೆಗೆ ಹುಲ್ಲು ತುಂಬಿಕೊಂಡು ಆಲೂರು ತಾಲ್ಲೂಕು ಕಿರಗಡಲು ಗ್ರಾಮದ ಸಂಬಂಧಿಕರ ಮನೆಗೆ ಇಳಿಸಲು ಬರುತ್ತಿದ್ದರು. ಬಿಸಿಲಿನ ಝಳಕ್ಕೆ ಹುಲ್ಲಿಗೆ ಬೆಂಕಿ ತಾಗಿದ್ದು ಕಿರಣ್ ಟ್ರ್ಯಾಕ್ಟರ್ ನಿಲ್ಲಿಸಿ ಹಗ್ಗ ಕತ್ತರಿಸುವಂತೆ ರಂಗಸ್ವಾಮಿಗೆ ಸೂಚಿಸಿದ್ದಾನೆ. ಆಗ ಅವರು ಟ್ರ್ಯಾಕ್ಟರ್‌ನಿಂದ ಕೆಳಗಿಳಿದು ಹಿಂಬದಿಯಿಂದ ಹಗ್ಗ ಕತ್ತರಿಸತ್ತಿದ್ದಾಗ ಉರಿಯುತ್ತಿದ್ದ ಹುಲ್ಲು ರಂಗಸ್ವಾಮಿ ಅವರ ಮೇಲೆ ಬಿದ್ದಿದೆ. ಬೆಂಕಿಯ ಕೆನ್ನಾಲಿಗೆಗೆ ದೇಹವೆಲ್ಲ ಸುಟ್ಟಿದ್ದು ಚಿಕಿತ್ಸೆಗಾಗಿ ಹಿಮ್ಸೌಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments