ರುದ್ರಪಟ್ಟಣದಲ್ಲಿ ಎಸ್ಎಸ್ಎಲ್ಸಿ ಮಕ್ಕಳ ಧರಣಿಗೆ ಕಾರಣವೇನು?
ಹಾಸನ: ಅರಕಲಗೂಡು ತಾಲ್ಲೂಕಿನ ರುದ್ರಪ್ಪಟಣ ಶ್ರೀ ಶಂಕರ ವಿದ್ಯ ಸಂಸ್ಥೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮುಖ್ಯ ಶಿಕ್ಷಕ ಜಿ.ಬಿ. ರಾಠೋಡ್ ಅವರನ್ನು ಆಡಳಿತ ಮಂಡಳಿ ಏಕಾಏಕಿ ಅಮಾನತು ಮಾಡಿದೆ ಎಂದು ಮಕ್ಕಳು ಆರೋಪಿಸಿದ್ದಾರೆ.
ಎಸ್ ಎಸ್ ಎಲ್ ಪರೀಕ್ಷೆ ಸಮೀಪಿಸುತ್ತಿದ್ದು ಈ ಸಮಯದಲ್ಲಿ ಶಿಕ್ಷಕರ ವರ್ಗಾವಣೆಯ ಅವಶ್ಯಕತೆ ಏನಿತ್ತು. ಆಡಳಿತ ಮಂಡಳಿ ಅಧ್ಯಕ್ಷ ಶಂಕರ್ ಅವರ ಸರ್ವಾಧಿಕಾರಿ ಧೋರಣೆಯಿಂದ ಭಾರಿ ತೊಂದರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎ. ಮಂಜು ಅವರಿಗೆ ದೂರವಾಣಿ ಕರೆ ಮಾಡಿದ ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರು. ಸ್ಥಳಕ್ಕೆ ಶಾಸಕ ಬರುವ ಭರವಸೆ ನೀಡಿದ್ದು ಪ್ರತಿಭಟನೆ ಮುಂದುವರೆದಿದೆ.

0 Comments