ಗೊರೂರು ರಂಜಿತ್‌ಗೆ ಭರ್ಜರಿ ಗೆಲುವು

ಗೊರೂರು ರಂಜಿತ್‌ಗೆ ಭರ್ಜರಿ ಗೆಲುವು



ಹಾಸನ: ಯುವ ಕಾಂಗ್ರೆಸ್‌‍ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆನ್‌ಲೈನ್‌ ಮೂಲಕ ನಡೆದ ಚುನಾವಣೆಯಲ್ಲಿ ಗೊರೂರು ರಂಜಿತ್‌ ಅವರು 12,207 ಮತಗಳನ್ನು ಪಡೆದುಕೊಳ್ಳುವ ಮೂಲಕ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಕಳೆದ ಬಾರಿಯೂ ಯುವ ಕಾಂಗ್ರೆಸ್‌‍ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2ನೇ ಬಾರಿಗೂ 8 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ರಂಗಸ್ವಾಮಿ ಅವರು 4711 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿದ್ದಾರೆ. ಕಾರ್ತಿಕ್‌ 4090 ಮತ ಪಡೆದು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

Post a Comment

0 Comments