ಕೊಡಗು ವಿವಿ ಮುಚ್ಚುವ ನಿರ್ಧಾರಕ್ಕೆ ನಾಪಂಡ ಮುತ್ತಪ್ಪ ಆಕ್ಷೇಪ
ಮಡಿಕೇರಿ: ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರಕ್ಕೆ ಶಿಪಾರಸ್ಸು ಮಾಡಿರುವ ಸಚಿವ ಸಂಪುಟದ ಉಪ ಸಮಿತಿಯ ನಿಲುವು ಅತ್ಯಂತ ವಿಷಾದಕರ ಮತ್ತು ಖಂಡನೀಯ ಎಂದು ನಾಪಂಡ ಮುತ್ತಪ್ಪ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಜಗತ್ತಿನಲ್ಲಿಯೆ ಅತ್ಯಂತ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡಗು ಜಿಲ್ಲೆಗೆ ಒಂದು ವಿಶ್ವ ವಿದ್ಯಾಲಯವನ್ನು ಈ ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಘೋಷಣೆ ಮಾಡಿತ್ತು. ಆದರೆ ಅದರ ನಿರ್ವಹಣೆಗೆ ಬೇಕಾದ ಹಣಕಾಸಿನ ಹಂಚಿಕೆಯನ್ನು ಸರಿಯಾಗಿ ಮಾಡಿರಲಿಲ್ಲ. ನಂತರ ಅದಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರ ಕೂಡ ಹಲವು ಬಾರಿ ಒತ್ತಡ ತಂದರೂ ಹಣಕಾಸಿನ ನೆರವನ್ನು ನೀಡಲು ಮುಂದೆ ಬರಲಿಲ್ಲ. ಹಣ ಕಾಸಿನ ನೆರವಿಲ್ಲದೆ ಸಿಬ್ಬಂದಿಗಳಿಗೆ ಸಂಬಳ ನೀಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ, ಬೋದಕರು ಮತ್ತು ಇತರ ಸಿಬ್ಬಂದಿಗಳಿಂದ ಒತ್ತಡದ ನಡುವೆ ವಿಶ್ವ ವಿಧ್ಯಾಲಯಗಳನ್ನು ಮುಚ್ಚುವಂತೆ ಹೇಳಿಕೆಗಳನ್ನು ಕೊಡಿಸಿದರು. ಈಗ ಮುಚ್ಚುವ ನಿರ್ಧಾರದ ಸಂದರ್ಭದಲ್ಲಿ ಅವರ ಹೇಳಿಕೆಯನ್ನೆ ಪ್ರಧಾನವಾಗಿ ಪ್ರಸ್ತಾಪಿಸಿ ಮುಚ್ಚಲು ಶಿಪಾರಸ್ಸು ಮಾಡಿರುವುದು ನಮ್ಮ ಕೊಡಗು ಜಿಲ್ಲೆಗೆ ಮಾಡಿರುವ ಅಪಮಾನ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಕ್ಷಣ ಕೊಡಗಿನ ಜನ ಪ್ರತಿನಿಧಿಗಳು ಮದ್ಯ ಪ್ರವೇಸಿಶಿ ವಿಶ್ವ ವಿದ್ಯಾಲಯವನ್ನು ಮುಚ್ಚುವ ನಿರ್ಧಾರದಿಂದ ಸರಕಾರವು ಹಿಂದೆ ಸರಿಯುವುದಕ್ಕೆ ಒತ್ತಡ ಹಾಕಬೇಕು.

0 Comments