ಜಿಪಂ ಸಿಇಒ ಅಮಾನತಿಗೆ ಸೂರಜ್‌ ಆಗ್ರಹ

ಜಿಪಂ ಸಿಇಒ ಅಮಾನತಿಗೆ ಸೂರಜ್‌ ಆಗ್ರಹ



ಹಾಸನ: ಜಿಲ್ಲಾ ಪಂಚಾಯಿತಿಯಲ್ಲಿ ಬ್ರಹಾಂಡ ಭ್ರಷ್ಟಾಚಾರ ನಡೆಯುತ್ತಿದ್ದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್‌. ಪೂರ್ಣಿಮಾ ಅವರನ್ನು ಅಮಾನತು ಮಾಡಿ ಸಮಗ್ರ ತನಿಖೆ ಮೂಲಕ ಭ್ರಷ್ಟಾಚಾರಕ್ಕೆ ಕೊನೆ ಹಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್‌ ರೇವಣ್ಣ ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿ, ನರೇಗಾ ಯೋಜನೆ ಹೆಚ್ಚುವರಿ ಡಿಪಿಆರ್‌ ಅನುಮೋದನೆಗೆ ಗ್ರಾಮ ಪಂಚಾಯಿತಿ ಪ್ರತಿ ಸದಸ್ಯನಿಂದ ಶೇ. ಕಮಿಷನ್‌ ಪಡೆಯಲಾಗಿದೆ. ಅರಸೀಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಗ್ರಾಪಂ ಪಿಡಿಓ ಹಾಗೂ ಸದಸ್ಯ ಮಾತನಾಡಿರುವ ಆಡಿಯೋ ಅದಕ್ಕೆ ಸಾಕ್ಷಿ. ಚನ್ನರಾಯಪಟ್ಟಣ ತಾಲ್ಲೂಕಿನ ಸಾತೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್‌ ಎಂಬಾತ ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಷ್ಟೆಲ್ಲ ಅವ್ಯವಹಾರ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ. ಸಂಸದ ಶ್ರೇಯಸ್‌‍ ಪಟೇಲ್‌ ಸಹ ಇಷ್ಟೆಲ್ಲಾ ನಡೆದರೂ ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Post a Comment

0 Comments