ಕೇಂದ್ರ ಸಚಿವರ ಬೆನ್ನುಬಿದ್ದ ಸಂಸದ ಶ್ರೇಯಸ್
ಹಾಸನ: ದೆಹಲಿ ಪ್ರವಾಸದಲ್ಲಿರುವ ಸಂಸದ ಶ್ರೇಯಸ್ ಪಟೇಲ್ ಅವರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತಿದ್ದಾರೆ.
ಅರಣ್ಯ ಸಚಿವ ಭೂಪೇಂದ್ರ ಯಾದವ್, ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಪ್ರವಾಸೋದ್ಯಮ ಸಚಿವ ಶೇಖಾವತ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.
ಆನೆ ಕಾರಿಡಾರ್ ಗೆ ವಿಷಯ ಪ್ರಸ್ತಾಪ:
ಜಿಲ್ಲೆಯ ಮಲೆನಾಡು ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕಾಡಾನೆ ಹಾವಳಿ ಪ್ರಮುಖವಾಗಿದೆ. ಕಾಡಾನೆಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕಾಡಾನೆ-ಮಾನವ ಸಂಘರ್ಷ ಜಟಿಲವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಈ ಸಮಸ್ಯೆ ನಿವಾರಣೆಗೆ ಹೆತ್ತೂರು ಭಾಗದ ಎಂಟು ಗ್ರಾಮಗಳ 412 ರೈತರು ಒಟ್ಟು 2261.21 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ. 2012ರಲ್ಲಿ ಜಿಲ್ಲಾ ಮಟ್ಟದ ಸಮಿತಿಯು ಈ ಸಂಬಂಧ ಸಮಗ್ರ ವರದಿಯನ್ನು ತಯಾರಿಸಿದೆ. ಹೆತ್ತೂರು ಭಾಗದಲ್ಲಿ ಕಾಡಾನೆಗಳು ಹೆಚ್ಚಿರುವುದರಿಂದ ಅಲ್ಲಿನ ರೈತರು ಜೀವ ಭಯದಲ್ಲೇ ಇದ್ದಾರೆ. ಸೂಕ್ತ ಪರಿಹಾರ ಕಲ್ಪಿಸಿದರೆ ಭೂಮಿ ನೀಡಲು ಈಗಲೂ ರೈತರು ಸಿದ್ಧರಿದ್ದಾರೆ. ಆದ್ದರಿಂದ CAMPA (Compensatory Afforestation Fund Management and Planning Authority) ಯೋಜನೆಯಡಿ ಪರಿಹಾರ ಕಲ್ಪಿಸಬೇಕು ಎಂದು ಕೋರಿದೆನು. ಆನೆ ಕಾರಿಡಾರ್ ನಿರ್ಮಾಣವೊಂದೇ ಅಲ್ಲಿನ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸುವ ದಾರಿಯಾಗಿದೆ.
ಒಟ್ಟು 416 ಭೂಮಾಲೀಕರು ತಮ್ಮ 2261.21 ಎಕರೆ ಭೂಮಿಯನ್ನು ಹಸ್ತಾಂತರಿಸಲು ಲಿಖಿತ ಮನವಿಯನ್ನು ನೀಡಿದ್ದರು. ಅದರ ವಿವರಗಳು ಈ ಕೆಳಗಿನಂತಿವೆ.
ಅರಣಿ ಗ್ರಾಮದ 55 ರೈತರು 368.13 ಎಕರೆ, ಬೋರನಮನೆ 62 ರೈತರು 406.19 ಎಕರೆ, ಬಾಳೆಹಳ್ಳ
ಗ್ರಾಮದ 46 ರೈತರು 272 ಎಕರೆ, ಬೆಟ್ಟಕುಮಾರಿ ಊರಿನ 62 ರೈತರು 218.37, ಮಂಕನಹಳ್ಳಿ 101 ರೈತರು 578.25 ಎಕರೆ, ಯತ್ನಹಳ್ಳದ 85 ರೈತರು 369.17, ಬಾಜಿಮನೆ ಎಸ್ಟೇಟ್ ನ 5 ರೈತರು 48 ಎಕರೆ ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

0 Comments