ಆರು ವರ್ಷದ ಮಗಳನ್ನು ಕೊಂದ ತಾಯಿ


ಚನ್ನರಾಯಪಟ್ಟಣ: ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ತಾಯಿಯೊಬ್ಬಳು ಹೆತ್ತ ಮಗಳನ್ನೇ ನೀರಿನ ತೊರೆಯಲ್ಲಿ ಮುಳುಗಿಸಿ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಶಿವಮೊಗ್ಗದ ರಘು ಹಾಗು ಶ್ವೇತಾ ಎಂಬುವರ ಪುತ್ರಿ ಸಾನ್ವಿ (6) ಮೃತ ದುರ್ದೈವಿ. ಶ್ವೇತಾ ಅವರ ತವರು ಮನೆ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದ್ದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಮಾನಸಿಕ ಅಸ್ವಸ್ಥ ತಾಯಿ: ಶ್ವೇತಾ ಅವರ ತಂದೆ ತಾಯಿ ಇಬ್ಬರೂ ನಿಧನರಾಗಿದ್ದು ಈಕೆಗೆ ಏಳು ಸಹೋದರಿಯರು. ಎಲ್ಲರೂ ಮದುವೆಯಾಗಿದ್ದಾರೆ. ಆಗಾಗ ತವರು ಮನೆಗೆ ಬಂದು ಇರುವ ಅಲ್ಪ ಜಮೀನನ್ನು ಅನುಭವಿಸುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಅಕ್ಕತಂಗಿಯರು ಬಂದು ಹೋಗುತ್ತಿದ್ದರು. 
ತಂದೆ-ತಾಯಿ ನಿಧನ, ಗಂಡನ ಮನೆಯಲ್ಲಿ ಮನಸ್ತಾಪ ಹೀಗೆ ನಾನಾ ಕಾರಣಗಳಿಂದ ಗಂಡನಿಂದ ದೂರವಾಗಿದ್ದ ಶ್ವೇತಾ ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಬಿಟ್ಟು ತವರು ಮನೆಯಲ್ಲೇ ಇದ್ದಳು. ಗಂಡ ರಘುನಿಂದ ವಿಚ್ಛೇದನಕ್ಕೆ ಮುಂದಾಗಿದ್ದಳು. ಕಳೆದ ನಾಲ್ಕು ತಿಂಗಳ ಹಿಂದೆ ಗ್ರಾಮದ ಹಿರಿಯರು ಸೇರಿ ರಾಜಿ ಸಂಧಾನದ ಮೂಲಕ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಶಿವಮೊಗ್ಗದಲ್ಲಿ ಇರಲು ಸಾಧ್ಯವಾಗದೆ ಶನಿವಾರ ಮಗುವಿನೊಂದಿಗೆ ತವರಿಗೆ ಬಂದಿದ್ದಳು ಎನ್ನಲಾಗಿದೆ.

Post a Comment

0 Comments