ಹೃದಯಾಘಾತ: ಮಗು ಜೊತೆ ಆಟವಾಡುತ್ತಲೇ ಪ್ರಾಣಬಿಟ್ಟ ತಂದೆ

ಹಾಸನ: ಒಂಬತ್ತು ತಿಂಗಳ ತನ್ನ ಮಗನ ಜೊತೆ ಆಟವಾಡುತ್ತಿದ್ದ ತಂದೆ ದಿಢೀರ್‌ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೇಲೂರು ತಾಲ್ಲೂಕು ಯಗಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಹಗರೆ ಸಮೀಪದ ಮಾದೀಹಳ್ಳಿ ಗ್ರಾಮದ ರವಿಕುಮಾರ್‌ (30) ಮೃತರು. ತನ್ನ ಪತ್ನಿ ಹಾಗು ಒಂಬತ್ತು ತಿಂಗಳ ಮಗುವನ್ನು ನೋಡಲೆಂದು ರವಿಕುಮಾರ್‌ ಹೆಂಡತಿ ತವರೂರು ಸಂಶಟ್ಟಿಹಳ್ಳಿಗೆ ಸೋಮವಾರ ತೆರಳಿದ್ದರು. ಸೋಮವಾರ ಸಂಜೆ ಪತ್ನಿಯನ್ನು ಮಾತನಾಡಿಸಿ ಮಗು ಜೊತೆ ಆಟವಾಡುತ್ತಿದ್ದಾಗಲೇ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವಷ್ಟರಲ್ಲಿ ಉಸಿರು ನಿಲ್ಲಿಸಿದ್ದಾರೆ. 
ಕೃಷಿಕರಾಗಿದ್ದ ರವಿಕುಮಾರ್‌ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಾದೀಹಳ್ಳಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನೆರವೇರಿತು.

Post a Comment

0 Comments