ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರ ಪರ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮೊಸಳೆ ಹೊಸ ಹಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಗುಡುಗಿದರು.
ಏ.4 ರಂದು ಹಾಸನದಲ್ಲಿ ದೊಡ್ಡ ಸಭೆ ಏರ್ಪಾಡು ಮಾಡಿದ್ದು ಅಲ್ಲಿ ಎಲ್ಲವನ್ನೂ ಮಾತಾಡುತ್ತೇನೆ.
ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಗೆ ನಮ್ಮ ಹುಡುಗರು ಉತ್ತರ ಕೊಟ್ಟಿದ್ದಾರೆ. ಪಬ್ಲಿಕ್ ಆಗಿ ಅವರು ಟ್ವೀಟ್ ಮಾಡಿರುವುದರಿಂದ ಏ.4 ರಂದು ಐವತ್ತು, ಅರವತ್ತು ಸಾವಿರ ಜನ ಸೇರ್ತಾರೆ. ಆ ಸಭೆಯಲ್ಲಿ ಎಲ್ಲಾ ವಿಷಯ ಪ್ರಸ್ತಾಪ ಮಾಡ್ತೀನಿ.
ಕುಮಾರಸ್ವಾಮಿ, ಪಕ್ಷದ ಬಗ್ಗೆ ಲಘುವಾಗಿ ವ್ಯಾಖ್ಯಾನ ಮಾಡಿದ್ದಾರೆ. ಕಾಂಗ್ರೆಸ್ ಕರ್ನಾಟಕ, ತೆಲಂಗಾಣ ಸೇರಿ
ಮೂರ್ನಾಲ್ಕು ಸಣ್ಣಸಣ್ಣ ರಾಜ್ಯಗಳಲ್ಲಿದೆ. ಆದರೆ ಸಿದ್ದರಾಮಯ್ಯ ಅಹಂನ ಮಾತಾಡಿದ್ದಾರೆ. ಮನುಷ್ಯನಿಗೆ ಅಧಿಕಾರದ ಮದ ಆ ಮಾತನ್ನು ಆಡಿಸುತ್ತೆ. ಆ ರೀತಿ ಮಾತನಾಡಬಾರದು.
ಮಗನನ್ನೇ ಗೆಲ್ಲಿಸಲಾಗದವನು ಚುನಾವಣೆಗೆ ನಿಂತಿದ್ದಾನೆ ಅವನನ್ನು ಮುಗಿಸುತ್ತೀನಿ ಅಂತಾರೆ.
ಕನ್ನಡಿಗೆ ಸ್ವಾಭಿಮಾನದ ಮಾತು ಎಂದರು.
ಕಾಂಗ್ರೆಸ್ ಬಗ್ಗೆ ಯಾವ್ಯಾವ ಶಬ್ದ ಬಳಕೆ ಮಾಡಿ ಮಾತನಾಡಿದ್ದೀರಿ ಎಂಬುದು ಗೊತ್ತಿದೆ. ಜಿಲ್ಲೆಗೆ ಸಿಎಂ, ಡಿಸಿಎಂ ಬರಲಿ, ಮೂರು ಸಾರಿ ಬರ್ತಾರಂತೆ ಬರಲಿ.
ಪ್ರಜ್ವಲ್‌ರೇವಣ್ಣ ವಿರುದ್ಧ ಹೋರಾಟ ಮಾಡಲು ಮೂರು ಸಾರಿ ಬರ್ತಾರಂತೆ ಬರಲಿ. ನನ್ನ ಜನ ಇದ್ದಾರೆ, ಮೂರು ಸಾರಿ ಬರಬೇಡಿ ಅಂತ ನಾನ್ಯೇಕೆ ಹೇಳಲಿ ಎಂದು ಟಾಂಗ್ ನೀಡಿದರು.
0 Comments