ಬ್ಲೇಡ್‌ನಿಂದ ಯುವಕನ ಮೇಲೆ ಹಲ್ಲೆ ಅದೃಷ್ಟವಶಾತ್ ಅಪಾಯದಿಂದ ಪಾರು

ಸಕಲೇಶಪುರ : ಪ್ರೇಮ ಪ್ರಕರಣ ವಿಚಾರವಾಗಿ ಯುವಕನ ಕತ್ತಿಗೆ ಬ್ಲೇಡ್‌ನಿಂದ ಕುಯ್ದು ಗಂಭೀರ ಗಾಯಗೊಳಿಸಿರುವ ಘಟನೆ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ.
ಕುಶಾಲನಗರ ಬಡಾವಣೆಯ ೭ನೇ ವಾರ್ಡ್ ನಿವಾಸಿ ಸುರೇಂದ್ರ (೨೩) ಗಾಯಾಳು. ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಳೆ ಬಸ್ ನಿಲ್ದಾಣದಲ್ಲಿ ಹೂವು ವ್ಯಾಪಾರಿ ಆಗಿರುವ ಮಹೇಶ್ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. 
ಪ್ರೇಮ ಪ್ರಕರಣವೊಂದರ ವಿಚಾರವಾಗಿ ಇಬ್ಬರ ನಡುವೆ ವೈಷಮ್ಯವಿತ್ತು. ಆಸ್ಪತ್ರೆಗಳಲ್ಲಿ ಶಸ್ತç ಚಿಕಿತ್ಸೆಗಾಗಿ ಬಳಸಲಾಗುವ ಬ್ಲೇಡ್‌ವೊಂದನ್ನು ತಂದು ಸುರೇಂದ್ರನ ಮನೆಗೆ ನುಗ್ಗಿ ಕತ್ತನ್ನು ಕುಯ್ಯುಲು ಯತ್ನಿಸಿದ್ದಾನೆ. ಅದೃಷ್ಟವಷಾತ್ ಸುರೇಂದ್ರ ಅಪಾಯದಿಂದ ಪಾರಾಗಿದ್ದಾನೆ. ತೀವ್ರ ನಿಗಾ ಘಟಕದಲ್ಲಿ ಸುರೇಂದ್ರಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪರಾರಿಯಾಗಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments