ಹಾಸನ: ತಾಲ್ಲೂಕಿನ ಶಾಂತಿಗ್ರಾಮ ಕೆರೆಯಲ್ಲಿ ಗುರುವಾರ ಯುವತಿಯ ಶವ ಪತ್ತೆಯಾಗಿದ್ದು, ಪ್ರಿಯಕರ ಮದುವೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕು ಅಕ್ಕನಹಳ್ಳಿಕೂಡು ಗ್ರಾಮದ ಅಮೃತ (೧೯) ಮೃತರು. ಹಿರೀಸಾವೆ ಹೋಬಳಿ ಮಸಕನಹಳ್ಳಿ ಗ್ರಾಮದ ದಿಲೀಪ್ ಎಂಬಾತ ಮದುವೆಯಾಗುವುದಾಗಿ ಹೇಳಿ ಪ್ರೀತಿಸಿ ಈಗ ವಿವಾಹ ಆಗುವುದಿಲ್ಲ ಎಂದು ನಿರಾಕರಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.
ಹಾಸನದ ಗೋಕುಲದಾಸ್ ಗಾರ್ಮೆಂಟ್ಸ್ಗೆ ಕೆಲಸಕ್ಕೆ ಬರುತ್ತಿದ್ದ ಅಮೃತ ಮಸಕನಹಳ್ಳಿಯ ದಿಲೀಪ್ ಎಂಬಾತನನ್ನು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಯ ವಿಚಾರ ಎರಡು ತಿಂಗಳ ಹಿಂದೆ ಮನೆಯವರಿಗೆ ಗೊತ್ತಾಗಿ ಮಾ. ೧೧ರಂದು ದಿಲೀಪ್‌ನನ್ನು ಯುವತಿಯ ಮನೆಗೆ ಬರಲು ಹೇಳಿದ್ದರು.
ಆತ ಮದುವೆಗೆ ನಿರಾಕರಿಸಿದ್ದರಿಂದ ಕೆರೆಗೆ ಹಾರಿದ್ದಾರೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments