ಹಾಸನ: ಸಿಎಲ್ 2 ಮದ್ಯದಂಗಡಿಗಳಲ್ಲಿ ಎಂಆರ್ ಪಿ ದರಪಟ್ಟಿ ಪ್ರದರ್ಶಿಸಬೇಕೆಂದು ಅಬಕಾರಿ ಅಧಿಕಾರಿಗಳಿಗೆ ಒತ್ತಾಯಿಸಲು ಹೋದಾಗ ಅಧಿಕಾರಿಗಳು ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಎಫ್ ಐಆರ್ ದಾಖಲಿಸಿದ್ದಾರೆ ಎಂದು ಮದ್ಯಪಾನ ಪ್ರಿಯರ ಹೋರಾಟ ಸಂಘದ ಅಧ್ಯಕ್ಷ ವೆಂಕಟೇಶಗೌಡ ಆರೋಪಿಸಿದರು.
ಪೊಲೀಸರು ಸಹ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಬಡಾವಣೆ ಠಾಣೆ ಪೊಲೀಸರು ಅಬಕಾರಿ ಅಧಿಕಾರಿಗಳ ಪರ ಕೆಲಸ ಮಾಡುತ್ತಿದ್ದಾರೆ. ಮದ್ಯಪಾನ ಪ್ರಿಯರಿಗೆ ಮದ್ಯದ ದರ ಗೊತ್ತಾಗಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಅಬಕಾರಿ ಆಯುಕ್ತರು ಉಢಾಪೆಯಿಂದ ವರ್ತಿಸುತ್ತಿದ್ದಾರೆ. ನಮ್ಮ ಮೇಲೆ ಕೇಸು ದಾಖಲಿಸುವ ಪೊಲೀಸರು ಅವರ ವಿರುದ್ಧವೂ ಎಫ್ ಐಆರ್ ದಾಖಲಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಫೆ. 28ರಂದು ನಾವು ಕಚೇರಿಗೆ ಹೋದಾಗ ಏನೇನಾಯ್ತು ಎಂಬುದನ್ನು ಸಿಸಿಟಿವಿ ಕ್ಯಾಮರಾದಲ್ಲಿ ಪರಿಶೀಲಿಸಬೇಕು.
ನಾವು ಮದ್ಯಪ್ರಿಯರು ಮಾತಿನಲ್ಲಿ ವ್ಯತ್ಯಾಸ ಆಗಬಹುದು. ಆದ್ರೆ ಅಧಿಕಾರಿಯೂ ಹಾಗೆಯೇ ವರ್ತಿಸಬೇಕಾ. ನಮ್ಮ ವಿರುದ್ದ ನೀಡಿದ ದೂರಿನಲ್ಲಿ ಏಕವಚನ ಬಳಸಿದ್ದಾರೆ ಎಂದರು.
ಮದ್ಯ ಸೇವಿಸುತ್ತೇವೆ ಎಂದ ಮಾತ್ರಕ್ಕೆ ಅವರು ಕೇಳಿದಷ್ಟು ದುಡ್ಡು ಕೊಡಬೇಕಾ. ಗ್ರಾಮಗಳಲ್ಲಿ ಕದ್ದುಮುಚ್ಚಿ ಎಣ್ಣೆ ಮಾರಾಟ ಮಾಡ್ತಿದಾರೆ. ಯಾರ ಮೇಲೂ ಕೇಸ್ ಹಾಕಿಲ್ಲ. ಕಾರಿನಲ್ಲಿ ತಗೊಂಡ್ ಹೋಗಿ ಎಣ್ಣೆ ಮಾರಾಟ ಮಾಡ್ತಾರೆ ಎಂದರು.
ವರ್ಷಕ್ಕೆ 38 ಸಾವಿರ ರೂ. ಆದಾಯ ತಂದುಕೊಟ್ಟರು ಸರ್ಕಾರ ಅಬಕಾರಿ ಇಲಾಖೆಗೆ ಸ್ವಂತ ಕಟ್ಟಡ ಕೊಟ್ಟಿಲ್ಲ. ಇದು ಅನ್ಯಾಯ ಎಂದರು.
0 Comments