ಹಾಸನದ ರಸ್ತೆ ಕಾಮಗಾರಿಗೆ ಹಣ ಮಂಜೂರು ಕೇಂದ್ರ ಸಚಿವ ಗಡ್ಕರಿ ಮಾಹಿತಿ

ಹಾಸನ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 373ರ ಯಡೇಗೌಡನಹಳ್ಳಿಯಿಂದ ಅರ್ಜುನಹಳ್ಳಿ ವರೆಗೆ ಚತುಷ್ಪಥ ಕಾಮಗಾರಿಗೆ 576.22 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣ 'ಎಕ್ಸ್'ನಲ್ಲಿ ಬರೆದುಕೊಂಡಿರುವ ಅವರು, 22.3 ಕಿ.ಮೀ. ಉದ್ದದ ಹೆದ್ದಾರಿ ಚತುಷ್ಪಥಗೊಳ್ಳಲಿದೆ. ಚಿಕ್ಕಮಗಳೂರು, ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳದಂತಹ ಪ್ರವಾಸಿ ತಾಣಗಳಿಗೆ ಈ ಕಾರಿಡಾರ್ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

Post a Comment

0 Comments