ಹಾಸನ: ಲೋಕಸಭೆ ಚುನಾವಣೆ ಹಿನ್ನಲೆ ಜಿಲ್ಲಾಡಳಿತ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, 17,36,610
ಮತದಾರರಿದ್ದಾರೆ. 8,63,727 ಪುರುಷ, 8,72,840 ಮಹಿಳಾ ಮತದಾರರಿದ್ದಾರೆ. 43 ಇತರೆ ಮತದಾರಿದ್ದಾರೆ. 85 ವರ್ಷ ಮೇಲ್ಪಟ್ಟ ಮತದಾರರು-2636, ದಿವ್ಯಾಂಗರು 1373 ಜನರಿದ್ದಾರೆ.
ಜಿಲ್ಲೆಯಲ್ಲಿ 2221 ಮತಗಟ್ಟೆ ರಚಿಸಲಾಗುವುದು.
ಚೆಕ್ ಪೋಸ್ಟ್ ಗಳಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 1,32,80,592 ನಗದು ವಶಪಡಿಸಿಕೊಳ್ಳಲಾಗಿದೆ.
9,76,49,731 ರೂ ಮೌಲ್ಯದ 5,68,822.92 ಲೀಟರ್ ಮದ್ಯ, 6,500 ರೂ. ಬೆಲೆಯ 0.127 ಗ್ರಾಂ ಡ್ರಗ್ಸ್, 5,00,651 ರೂ. ಬೆಲೆಯ 111 ವಿವಿಧ ಉಡುಗೊರೆ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದರು.
0 Comments