ಇನ್ನು 50 ವರ್ಷ ಕಾಂಗ್ರೆಸ್ ಗೆ ಅಧಿಕಾರ ಸಿಗಲ್ಲ ಕಾಂಗ್ರೆಸ್ ನಾಯಕತ್ವ ಇಲ್ಲದ ಪಕ್ಷ

ಹಾಸನ: ಮುಂದಿನ 50 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದ ಕನಸು ಕಾಣುವುದನ್ನೇ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, 
ಕಾಂಗ್ರೆಸ್ ಗೆ ದೇಶದಲ್ಲಿ ನಾಯಕತ್ವವೇ ಇಲ್ಲ. ದೇಶದ ಅಭಿವೃದ್ಧಿ, ಭದ್ರತೆ ವಿಚಾರಗಳ ಮೇಲೆ ಲೋಕಸಭೆ ಚುನಾವಣೆ ನಡೆಯುತ್ತದೆ. ದೇಶದ ವಿಚಾರಗಳ ಬಗ್ಗೆ ಕಾಂಗ್ರೆಸ್ ನವರು ಎಲ್ಲಿಯೂ ಮಾತಾಡ್ತಿಲ್ಲ. ಗ್ಯಾರಂಟಿ ಗಳನ್ನು ಇಟ್ಟುಕೊಂಡು ಚುನಾವಣೆ ಮಾಡ್ತಿದ್ದಾರೆ ಎಂದರು. ಆರ್ಥಿಕವಾಗಿ ಭಾರತ ಮೊದಲ ಸ್ಥಾನದಲ್ಲಿರಬೇಕೆಂದು ಮೋದಿ ಕೆಲಸ ಮಾಡುತ್ತಿದ್ದಾರೆ. 
ಮೋದಿ ನಿಷ್ಕಳಂಕ ರಾಜಕಾರಣಿ ಎಂದರು.
ಮೊಸಳೆ ಕಣ್ಣೀರು ಹಾಕೋದ್ರಲ್ಲಿ ಕಾಂಗ್ರೆಸ್ಸಿಗರು ನಿಸ್ಸಿಮರು. ಅಂಬೇಡ್ಕರ್ ಅವರನ್ನ 2 ಬಾರಿ ಚುನಾವಣೆಯಲ್ಲಿ ಸೋಲಿಸಿದರು. ಇಂದಿರಾಗಾಂಧಿ, ರಾಜೀವ್ ಗಾಂಧಿ, ನೆಹರು ಅವರಿಗೆ ಕಾಂಗ್ರೆಸ್ ಭಾರತ ರತ್ನ ನೀಡಲೇ ಇಲ್ಲ. ನಂತರ ವಿ.ಪಿ.ಸಿಂಗ್ ಅವರು ಅಟಲ್ ಬಿಹಾರಿ ವಾಜಪೇಯಿ ಸಹಕಾರದಿಂದ ನೀಡಿದರು. ಅಂಬೇಡ್ಕರ್ ಅಂತ್ಯಕ್ರಿಯೆಗೂ ಕಾಂಗ್ರೆಸ್ ಸಹಕರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.


ಮಾಜಿ ಶಾಸಕ ಪ್ರೀತಂ ಗೌಡ ಬೇರೆ ಕಡೆ ಕೆಲಸ ಮಾಡ್ತಿದ್ದಾರೆ. ಹಾಸನದಲ್ಲಿ ಎನ್ ಡಿಎ ಅಭ್ಯರ್ಥಿ ವಿರುದ್ದ ಯಾರೂ ಕೆಲಸ ಮಾಡ್ತಿಲ್ಲ. ಬಿಜೆಪಿ ಕಷ್ಟದಲ್ಲಿದ್ದಾಗ ಕಟ್ಟುತ್ತಾರೆಯೋ ಅವರು ಗಟ್ಟಿ ಕಾರ್ಯಕರ್ತರು. ಚುನಾವಣೆ ವೇಳೆ ಬೇರೆ ಪಕ್ಷಕ್ಕೆ ಸಪೋರ್ಟ್ ಮಾಡುವವರು ನಮ್ಮ ಕಾರ್ಯಕರ್ತರಲ್ಲ ಎಂದರು.

Post a Comment

0 Comments